ADVERTISEMENT

ಶಾಂತಾ ರಂಗಪ್ರೇಕ್ಷಕರ ಸ್ಟ್ಯಾಂಡ್‌ಗೆ ಶಾಂತಾ ರಂಗಸ್ವಾಮಿ ನಾಮಕರಣ ಇಂದುಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:31 IST
Last Updated 12 ಫೆಬ್ರುವರಿ 2026, 23:31 IST
<div class="paragraphs"><p>ಶಾಂತಾ ರಂಗಸ್ವಾಮಿ</p></div>

ಶಾಂತಾ ರಂಗಸ್ವಾಮಿ

   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಹೆಗ್ಗುರುತು ಎಂ. ಚಿನ್ನಸ್ವಾಮಿ ಕ್ರೀಡಾಂಗಣವು (1974–75 ರಿಂದ 2025–26) 50 ವರ್ಷ ಪೂರೈಸಿದ ಪ್ರಯುಕ್ತ ಇದೇ 13ರಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ಪ್ರೇಕ್ಷಕರ ಸ್ಟ್ಯಾಂಡ್‌ಗೆ ನಾಮಕರಣ ಮಾಡಲಾಗುತ್ತದೆ.

ಕ್ರೀಡಾಂಗಣದಲ್ಲಿ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಕ್ರಿಕೆಟ್ ಅಕಾಡೆಮಿಯ ಅನಾವರಣ, 2026-27ರ ಋತುವಿನ ಸಮಗ್ರ ಮಾರ್ಗಸೂಚಿ ಮತ್ತು ಅಭಿವೃದ್ಧಿ ಯೋಜನೆಗಳ ಪ್ರಸ್ತುತಿ, 2026-27ರ ಋತುವಿನ ಕ್ರಿಕೆಟ್‌ ಟೂರ್ನಿಗಳ ಉದ್ಘಾಟನೆ, ಸ್ಪರ್ಧಾತ್ಮಕ ಕ್ರಿಕೆಟ್ ಕ್ಯಾಲೆಂಡರ್‌ನ ಘೋಷಣೆ ನಡೆಯಲಿದೆ.

ADVERTISEMENT

ಕ್ರಿಕೆಟ್‌ ದಿಗ್ಗಜರಾದ ಅನಿಲ್‌ ಕುಂಬ್ಳೆ ಹೆಸರನ್ನು ‘ಪೆವಿಲಿಯನ್‌ ಎಂಡ್‌’ಗೆ, ರಾಹುಲ್ ದ್ರಾವಿಡ್ ಹೆಸರನ್ನು ‘ಉತ್ತರ ಎಂಡ್‌’ಗೆ ಇಡಲಾಗುತ್ತದೆ ಎಂದು ಕೆಎಸ್‌ಸಿಎ ಪ್ರಟಕಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.