ADVERTISEMENT

IND vs ENG Test: ಪಂದ್ಯದಿಂದ ಹೊರಬಿದ್ದ ಇಂಗ್ಲೆಂಡ್‌ ವೇಗಿ ಕ್ರಿಸ್ ವೋಕ್ಸ್

ಪಿಟಿಐ
Published 1 ಆಗಸ್ಟ್ 2025, 9:48 IST
Last Updated 1 ಆಗಸ್ಟ್ 2025, 9:48 IST
   

ಲಂಡನ್‌: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಐದನೇ ಟೆಸ್ಟ್‌ ಪಂದ್ಯದಲ್ಲಿ ಭುಜದ ಗಾಯದ ಸಮಸ್ಯೆಗೆ ತುತ್ತಾಗಿರುವ ಇಂಗ್ಲೆಂಡ್‌ ವೇಗದ ಬೌಲರ್ ಕ್ರಿಸ್ ವೋಕ್ಸ್ ಅವರು ಪಂದ್ಯದಿಂದ ಹೊರಬಿದ್ದಿದ್ದಾರೆ.

ಕ್ಷೇತ್ರರಕ್ಷಣೆ ವೇಳೆ ಬೌಂಡರಿ ಲೈನ್‌ ಬಳಿಯಿದ್ದ ಕ್ರಿಸ್ ವೋಕ್ಸ್, ಭಾರತದ ಕರುಣ್‌ ನಾಯರ್‌ ಲಾಂಗ್‌ ಆಫ್‌ಗೆ ಹೊಡೆದಿದ್ದನ್ನು ತಡೆಯುಲು ಪ್ರಯತ್ನಿಸುವಾಗ ಭುಜದ ಗಾಯದ ಸಮಸ್ಯೆಗೆ ತುತ್ತಾಗಿ ಮೈದಾನ ತೊರೆದಿದ್ದರು.

ಕ್ರಿಸ್ ವೋಕ್ಸ್ ಅವರು ವೈದ್ಯಕೀಯ ನಿಗಾದಲ್ಲಿದ್ದು, ಗಂಭೀರ ಸ್ವರೂಪದ ಗಾಯವಾಗಿರುವುದರಿಂದ ಪಂದ್ಯದಿಂದ ಹಿಂದೆ ಸರಿದಿದ್ದಾರೆ ಎಂದು ಇಸಿಬಿ ತಿಳಿಸಿದೆ.

ADVERTISEMENT

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್‌ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಮೊದಲ ದಿನ 14 ಓವರ್‌ ಬೌಲಿಂಗ್‌ ಮಾಡಿರುವ ಕ್ರಿಸ್ ವೋಕ್ಸ್, ಆರಂಭಿಕ ಕೆ.ಎಲ್‌ ರಾಹುಲ್‌ ವಿಕೆಟ್‌ ಪಡೆದು ಇಂಗ್ಲೆಂಡ್‌ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದರು.

ನಾಯಕ ಬೆನ್‌ ಸ್ಟೋಕ್ಸ್‌ ಸೇರಿದಂತೆ ಇಂಗ್ಲೆಂಡ್‌ನ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಕ್ರಿಸ್ ವೋಕ್ಸ್ ಕೂಡ ಪಂದ್ಯದಿಂದ ಹೊರ ಬಿದ್ದಿರುವುದು ಇಂಗ್ಲೆಂಡ್‌ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಮಳೆ ಅಡಚಣೆಯ ನಡುವೆಯೂ ಮೊದಲ ದಿನದ ಅಂತ್ಯಕ್ಕೆ ಭಾರತ 64 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿದೆ.

ಓವಲ್‌ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯುತ್ತಿದೆ. ಸರಣಿಯಲ್ಲಿ ಇಂಗ್ಲೆಂಡ್‌ ತಂಡವು 2–1ರ ಮುನ್ನಡೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.