ADVERTISEMENT

ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ: ಕೇರಳ ಹೋರಾಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 19:58 IST
Last Updated 3 ಫೆಬ್ರುವರಿ 2025, 19:58 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಆಫ್ ಸ್ಪಿನ್ನರ್ ಕೆ.ಶಶಿಕುಮಾರ್ 5 ವಿಕೆಟ್‌ ಪಡೆದರೂ ಕೇರಳ ತಂಡ, ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ ಪಂದ್ಯದ ಮೂರನೇ ದಿನವಾದ ಸೋಮವಾರ ಪ್ರತಿಹೋರಾಟ ತೋರಿ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 341 ರನ್‌ ಗಳಿಸಿ ಹೋರಾಟ ತೋರಿತು. ಕೇರಳ ತಂಡದ ನಾಯಕ ಪವನ್ ಶ್ರೀಧರ್ ಶತಕ ಗಳಿಸಿದರು.

ADVERTISEMENT

ಕೇರಳದ 327 ರನ್‌ಗಳ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ ಆಲೂರು3 ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನ ಕರ್ನಾಟಕ 335 ರನ್ ಗಳಿಸಿ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು.

ಸಂಕ್ಷಿಪ್ತ ಸ್ಕೋರು:

ಕೇರಳ: 327 ಮತ್ತು 98 ಓವರುಗಳಲ್ಲಿ 7 ವಿಕೆಟ್‌ಗೆ 341 (ಒಮರ್ ಅಬೂಬಕರ್ 69, ಪವನ್ ಶ್ರೀಧರ್ 120, ರೋಹನ್ ನಾಯರ್ 39, ಕಿರಣ್ ಸಾಗರ್ ಬ್ಯಾಟಿಂಗ್ 50; ಶಶಿ ಕುಮಾರ್ ಕೆ. 130ಕ್ಕೆ5); ಕರ್ನಾಟಕ: 335.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.