ಕ್ರಿಕೆಟ್
(ಸಾಂಕೇತಿಕ ಚಿತ್ರ)
ಹುಬ್ಬಳ್ಳಿ: ಆಲ್‌ರೌಂಡರ್ ಅನೀಶ್ವರ್ ಗೌತಮ್ ನಾಯಕತ್ವದ ಕರ್ನಾಟಕ ತಂಡ ಭಾನುವಾರ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.
ಕಳೆದ ಬಾರಿ ಕರ್ನಾಟಕ ತಂಡವು ಮೊದಲ ಬಾರಿಗೆ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಗೆದ್ದುಕೊಂಡಿತ್ತು. ಈ ಬಾರಿಯೂ ಗೆಲುವಿನೊಂದಿಗೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಯುವ ಹಾಗೂ ಅನುಭವಿಗಳಾದ ಮ್ಯಾಕ್ನಿಲ್ ನೊರೊನ್ಹಾ, ಪ್ರಖರ್ ಚತುರ್ವೇದಿ, ಕೃತಿಕ್ ಕೃಷ್ಣ, ಪಾರಸ್ ಗುರುಬಕ್ಷ್ ಆರ್ಯ, ಯಶೋವರ್ಧನ್ ಪರಂತಾಪ್ ಮತ್ತು ಸ್ಥಳೀಯ ಪ್ರತಿಭೆ, ಕಳೆದ ಬಾರಿ ರಣಜಿ ಟೂರ್ನಿಯಲ್ಲಿ ಆಡಿದ್ದ ಶಶಿಕುಮಾರ್ ಕೆ., ತಂಡದಲ್ಲಿದ್ದಾರೆ.
ಗುರುವಾರವೇ ನಗರಕ್ಕೆ ಬಂದಿದ್ದ ತಮಿಳುನಾಡು ತಂಡದ ಆಟಗಾರರು ಶುಕ್ರವಾರ ಬೆಳಿಗ್ಗೆ ಕೆಲ ಹೊತ್ತು ಅಭ್ಯಾಸ ನಡೆಸಿದರು. ರಾತ್ರಿ ಮಳೆ ಸುರಿದಿದ್ದರಿಂದ ಶನಿವಾರ ಕರ್ನಾಟಕದ ಆಟಗಾರರಿಗೆ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಶಿಖರ್ ಶೆಟ್ಟಿ ಗಾಯಗೊಂಡಿರುವುದರಿಂದ ಅವರು ಅಲಭ್ಯರಾಗಿದ್ದಾರೆ.
ಕರ್ನಾಟಕ ತಂಡ ಇಂತಿದೆ: ವಿಶಾಲ್ ಓನತ್, ಮ್ಯಾಕ್ನಿಲ್ ನೊರೊನ್ಹಾ, ಜಾಸ್ಪರ್ ಇ.ಜೆ., ಪ್ರಖರ್ ಚತುರ್ವೇದಿ, ಹರ್ಷಿಲ್ ಧರ್ಮಾನಿ, ಅನೀಶ್ವರ್ ಗೌತಮ್ (ನಾಯಕ), ಯಶೋವರ್ಧನ್ ಪರಂತಾಪ್ (ಉಪ ನಾಯಕ), ಕೃತಿಕ್ ಕೃಷ್ಣ, (ವಿಕೆಟ್ ಕೀಪರ್), ಮನ್ವಂತ ಕುಮಾರ್ ಎಲ್., ಮೋನಿಶ್ ರೆಡ್ಡಿ, ಶಶಿಕುಮಾರ್ ಕೆ., ಪಾರಸ್ ಗುರುಬಕ್ಷ್ ಆರ್ಯ, ನಥನ್ ಡಿಮೆಲ್ಲೊ, ಸಂಜಯ್ ಅಶ್ವಿನ್, ಧನುಷ್ ಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.