
ಬೆಂಗಳೂರು: ಸ್ಪಿನ್ನರ್ ಶಶಿಕುಮಾರ್ ಕೆ. (56ಕ್ಕೆ 6) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ 20 ರನ್‌ಗಳ ಮುನ್ನಡೆ ಪಡೆಯಿತು.
ಮೀರತ್‌ನ ವಿಕ್ಟೋರಿಯಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತಂಡವು ಹಾರ್ದಿಕ್‌ರಾಜ್ (ಔಟಾಗದೇ 54; 83ಎ) ಅವರ ಅರ್ಧಶತಕದ ನೆರವಿನಿಂದ 75.1 ಓವರ್‌ಗಳಲ್ಲಿ 235 ರನ್ ಗಳಿಸಿತು.
ಅದಕ್ಕೆ ಪ್ರತಿಯಾಗಿ ಉತ್ತರಪ್ರದೇಶ ತಂಡವು 83.1 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟ್ ಆಯಿತು. ಶಶಿಕುಮಾರ್ ಆರು ವಿಕೆಟ್‌ಗಳ ಗೊಂಚಲು ಪಡೆದರೆ, ಹಾರ್ದಿಕ್ ರಾಜ್ ಮೂರು ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಕೊಂಚ ಮುನ್ನಡೆ ಪಡೆದ ಕರ್ನಾಟಕ, ಎರಡನೇ ದಿನದಾಟದ ಅಂತ್ಯಕ್ಕೆ 19 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 50 ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಕರ್ನಾಟಕ: 75.1 ಓವರ್‌ಗಳಲ್ಲಿ 235 (ಜಸ್ಪರ್ ಇ.ಜೆ. 38, ಸಿ.ಆರ್. ಸಿ.ಆರ್. ಹಾರ್ದಿಕ್‌ರಾಜ್ ಔಟಾಗದೇ 54; ಶುಭಂ ಮಿಶ್ರಾ 65ಕ್ಕೆ 3, ಕಾರ್ತಿಕ್ ಯಾದವ್ 40ಕ್ಕೆ 4). ಉತ್ತರಪ್ರದೇಶ: 83.1 ಓವರ್‌ಗಳಲ್ಲಿ 215 (ಋತುರಾಜ್ ಶರ್ಮಾ 48; ಹಾರ್ದಿಕ್‌ರಾಜ್ 79ಕ್ಕೆ 3, ಶಶಿಕುಮಾರ್ ಕೆ. 56ಕ್ಕೆ 6). ಎರಡನೇ ಇನಿಂಗ್ಸ್: ಕರ್ನಾಟಕ: 19 ಓವರ್‌ಗಳಲ್ಲಿ 2 ವಿಕೆಟ್‌ಗೆ 50 (ನಾಯಕ ಅನೀಶ್ವರ್ ಗೌತಮ್ ಔಟಾಗದೇ 32)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.