ADVERTISEMENT

‘ತೂಕದ ಆಸಾಮಿ’ಗೆ ಖುಷಿ ಕೊಟ್ಟ ಪೂಜಾರ ವಿಕೆಟ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:30 IST
Last Updated 31 ಆಗಸ್ಟ್ 2019, 19:30 IST
ರಹಕೀಮ್‌ ಕಾರ್ನವಾಲ್‌
ರಹಕೀಮ್‌ ಕಾರ್ನವಾಲ್‌   

ಕಿಂಗ್‌ಸ್ಟನ್‌ (ಪಿಟಿಐ): ಚೊಚ್ಚಲು ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲೇ ಚೇತೇಶ್ವರ್‌ ಪೂಜಾರ ಅವರ ವಿಕೆಟ್‌ ಪಡೆದಿರುವುದರಿಂದ ಖುಷಿಯಾಗುತ್ತಿದೆ ಎಂದು ವೆಸ್ಟ್‌ ಇಂಡೀಸ್‌ನ ದೈತ್ಯ ಆಲ್‌ರೌಂಡರ್‌ ರಹಕೀಮ್‌ ಕಾರ್ನ್‌ವಾಲ್‌ ಹೇಳಿದ್ದಾರೆ.

ಭಾರತ ವಿರುದ್ಧ ಶುಕ್ರವಾರ ಆರಂಭವಾದ ಎರಡನೇ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಂತರ ಕಾರ್ನ್‌ವಾಲ್‌ ಅವರು ವಿಶ್ವ ಕ್ರಿಕೆಟ್‌ನ ‘ತೂಕದ ಆಸಾಮಿ’ ಎನಿಸಿದ್ದಾರೆ. 26 ವರ್ಷದ ಈ ಆಫ್‌ ಸ್ಪಿನ್ನರ್‌ 27 ಓವರುಗಳನ್ನು ಬೌಲ್‌ ಮಾಡಿದ್ದು, 69 ರನ್‌ ಕೊಟ್ಟಿದ್ದಾರೆ. ಮೂರನೇ ಓವರ್‌ನಲ್ಲೇ ಪೂಜಾರ (6) ವಿಕೆಟ್‌ ಪಡೆದಿದ್ದಾರೆ.

‘ಅವರನ್ನು (ಪೂಜಾರ) ನನ್ನ ಮೊದಲ ವಿಕೆಟ್‌ ಆಗಿ ಪಡೆದಿದ್ದು ಖುಷಿ ಕೊಟ್ಟಿದೆ. ನನಗೆ ಇದು ದೊಡ್ಡ ಸಂಭ್ರಮ ಅಲ್ಲದಿದ್ದರೂ, ಖುಷಿಕೊಟ್ಟಿರುವುದು ನಿಜ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅವರ ತೂಕ 140 ಕೆ.ಜಿ. ಇದೆ. ಆಸ್ಟ್ರೇಲಿಯಾದ ವಾರ್ವಿಕ್‌ ಆರ್ಮ್‌ಸ್ಟ್ರಾಂಗ್‌ ಅವರು 133 ರಿಂದ 139 ಕೆ.ಜಿ.ವರೆಗೆ ಇದ್ದು ಅವರ ದಾಖಲೆ ಕಾರ್ನ್‌ವಾಲ್‌ ಮುರಿದಿದ್ದಾರೆ.

ADVERTISEMENT

ಮೊದಲ ದಿನ ಎರಡು ಕ್ಯಾಚ್‌ಗಳನ್ನೂ (ರಾಹುಲ್‌ ಮತ್ತು ಮಯಂಕ್‌) ಪಡೆದ ಆ್ಯಂಟಿಗಾದ ಈ ಆಟಗಾರ ಚುರುಕುತನಕ್ಕೆ ದಢೂತಿದೇಹ ಅಡ್ಡಿಯಾಗದು ಎಂದು ತೋರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.