ADVERTISEMENT

ಒಲಿಂಪಿಕ್ಸ್‌: ಬಿಡ್‌ ಸಲ್ಲಿಕೆಗೆ ಕೇಜ್ರಿವಾಲ್ ಒಲವು

ಪಿಟಿಐ
Published 9 ಮಾರ್ಚ್ 2021, 19:45 IST
Last Updated 9 ಮಾರ್ಚ್ 2021, 19:45 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿಯಲ್ಲಿ 2048ರಲ್ಲಿ ಒಲಿಂಪಿಕ್ ಕೂಟವನ್ನು ಆಯೋಜಿಸಲು ಬಿಡ್ ಸಲ್ಲಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

1951ರಲ್ಲಿ ದೆಹಲಿಯಲ್ಲಿ ಮೊದಲ ಏಷ್ಯನ್ ಗೇಮ್ಸ್‌ ಆಯೋಜನೆಯಾಗಿತ್ತು. 1982ರಲ್ಲಿ ಒಂಬತ್ತನೇ ಏಷ್ಯನ್ ಗೇಮ್ಸ್‌ ಮತ್ತು 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ಕೂಡ ಇಲ್ಲಿ ಆಯೋಜನೆಯಾಗಿದ್ದವು.

’ಒಲಿಂಪಿಕ್ ಕೂಟಕ್ಕೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನೂ ಇಲ್ಲಿ ಅಭಿವೃದ್ಧಿಪಡಿಸಲಾಗುವುದು. ದೆಹಲಿಯಲ್ಲಿ ಒಲಿಂಪಿಕ್ ಆಯೋಜನೆ ಮಾಡಬೇಕೆನ್ನುವುದು ನಮ್ಮ ದೊಡ್ಡ ಕನಸು‘ ಎಂದು ಕೇಜ್ರಿವಾಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.