ADVERTISEMENT

ಕೂಚ್‌ ಬಿಹಾರ್ ಟ್ರೋಫಿ: ಕರ್ನಾಟಕ ವಿರುದ್ಧ ಆಂಧ್ರ ಹಿಡಿತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 16:06 IST
Last Updated 2 ಡಿಸೆಂಬರ್ 2025, 16:06 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಆಂಧ್ರ ಪ್ರದೇಶ ತಂಡವು ಕೂಚ್‌ ಬಿಹಾರ್ ಟ್ರೋಫಿ ಎಲೀಟ್‌ ಸಿ ಗುಂಪಿನ ಪಂದ್ಯದ ಎರಡನೇ ದಿನವಾದ ಮಂಗಳವಾರ ಮೊದಲ ಇನಿಂಗ್ಸ್‌ನಲ್ಲಿ 122 ಓವರ್‌ಗಳಲ್ಲಿ 415 ರನ್‌ಗಳಿಗೆ ಆಲೌಟ್‌ ಆಯಿತು. ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗಳಿಗೆ 176 ರನ್‌ ಗಳಿಸಿದ್ದು, ಮೊದಲ ಇನಿಂಗ್ಸ್‌ ಬಾಕಿ ಚುಕ್ತಾ ಮಾಡಲು ಇನ್ನೂ 239 ರನ್‌ ಗಳಿಸಬೇಕಿದೆ.

ADVERTISEMENT

ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನ 5 ವಿಕೆಟ್‌ಗಳಿಗೆ 300 ರನ್‌ ಗಳಿಸಿದ್ದ ಆತಿಥೇಯ ತಂಡವು, ಎ.ಲೋಹಿತ್‌ (74) ಹಾಗೂ ಪರಮವೀರ್‌ ಸಿಂಗ್‌ (70) ಅವರ ಬ್ಯಾಟಿಂಗ್‌ ಬಲದಿಂದ 400ಕ್ಕೂ ಅಧಿಕ ರನ್‌ ಗಳಿಸುವಲ್ಲಿ ಯಶಸ್ವಿಯಾಯಿತು. ರತನ್‌ ಬಿ.ಆರ್‌. (80ಕ್ಕೆ4) ಹಾಗೂ ಧ್ಯಾನ್‌ ಎಂ. ಹಿರೇಮಠ (120ಕ್ಕೆ3) ಕರ್ನಾಟಕ ಪರ ಯಶಸ್ವಿ ಬೌಲರ್‌ಗಳೆನಿಸಿದರು.

ಬಳಿಕ, ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದ ಆಂಧ್ರ ತಂಡವು ಅನ್ವಯ್‌ ದ್ರಾವಿಡ್‌ ಪಡೆಯ ಅಗ್ರಕ್ರಮಾಂಕವನ್ನು ಕಟ್ಟಿಹಾಕಿತು. ಎನ್‌. ರಾಜೇಶ್‌ 2 ವಿಕೆಟ್‌ ಪಡೆದರೆ, ಸಿದ್ದು ಕೆ. ರೆಡ್ಡಿ ಹಾಗೂ ಎ.ಲೋಹಿತ್‌ ತಲಾ ಒಂದು ವಿಕೆಟ್‌ ಕಿತ್ತರು.

ಕುಸಿತದತ್ತ ಸಾಗುತ್ತಿದ್ದ ರಾಜ್ಯ ತಂಡಕ್ಕೆ ಮಣಿಕಂಠ ಶಿವಾನಂದ (56) ಹಾಗೂ ಸಿದ್ಧಾರ್ಥ್‌ ಅಖಿಲ್‌ (ಔಟಾಗದೇ 60) ಆಸರೆಯಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಂಧ್ರ ಪ್ರದೇಶ: 122 ಓವರ್‌ಗಳಲ್ಲಿ 415 (ಹನೀಶ್‌ ರೆಡ್ಡಿ 104, ಕೆ.ಎಲ್‌.ಶ್ರೀನಿವಾಸ್‌ 98, ಪರಮವೀರ್‌ ಸಿಂಗ್‌ 70, ಎ.ಲೋಹಿತ್‌ 74; ರತನ್‌ ಬಿ.ಆರ್‌. 80ಕ್ಕೆ4, ಧ್ಯಾನ್‌ ಎಂ. ಹಿರೇಮಠ 120ಕ್ಕೆ3). ಕರ್ನಾಟಕ: 62 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 176 (ಮಣಿಕಂಠ ಶಿವಾನಂದ 56, ಸಿದ್ಧಾರ್ಥ್‌ ಅಖಿಲ್‌ ಔಟಾಗದೇ 60; ಎನ್‌.ರಾಜೇಶ್‌ 50ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.