ADVERTISEMENT

ಕೋವಿಡ್–19 ಭೀತಿ | ಇಂಗ್ಲೆಂಡ್‌ನಲ್ಲಿ ಮೇ 28ರವರೆಗೆ ಕ್ರಿಕೆಟ್ ಚಟುವಟಿಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 7:02 IST
Last Updated 21 ಮಾರ್ಚ್ 2020, 7:02 IST
ಇಂಗ್ಲೆಂಡ್‌ ತಂಡದ ಆಟಗಾರರು (ಸಾಂದರ್ಭಿಕ ಚಿತ್ರ)
ಇಂಗ್ಲೆಂಡ್‌ ತಂಡದ ಆಟಗಾರರು (ಸಾಂದರ್ಭಿಕ ಚಿತ್ರ)   

ಲಂಡನ್‌:ಜಾಗತಿಕ ಪಿಡುಗು ಕೋವಿಡ್‌–19 ಭೀತಿಯಿಂದಾಗಿ ಮೇ 28ರ ವರೆಗೆ ವೃತ್ತಿಪರ ಕ್ರಿಕೆಟ್‌ ಚಟುವಟಿಕೆಗಳನ್ನು ನಿಲ್ಲಿಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ತೀರ್ಮಾನಿಸಿದೆ.

ವೃತ್ತಿಪರ ಕ್ರಿಕೆಟ್‌ ಮಂಡಳಿ (ಪಿಸಿಎ), ಮೆಲ್ಬೋರ್ನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಜೊತೆಗಿನ ಸಭೆ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಇನ್ನೂ ಏಳು ವಾರಗಳ ಕಾಲ ಕ್ರಿಕೆಟ್‌ ಚಟುವಟಿಕೆಗಳನ್ನು ಮುಂದೂಡುವುದು ಉತ್ತಮ ಎಂದು ಇಸಿಬಿ ಹೇಳಿದೆ.

ಜೂನ್‌, ಜುಲೈ ಅಥವಾ ಆಗಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿ ಮತ್ತು ಟಿ20 ಸರಣಿ ಹಾಗೂ ಭಾರತ ಮಹಿಳಾ ತಂಡದ ವಿರುದ್ಧ ಟೂರ್ನಿ ಆಯೋಜಿಸುವ ಕುರಿತು ಯೋಜಿಸುತ್ತಿರುವುದಾಗಿಯೂ ತಿಳಿಸಿದೆ.

ADVERTISEMENT

ಪ್ರಪಂಚದಾದ್ಯಂತ ಶುಕ್ರವಾರದವರೆಗೆ ಸುಮಾರು2,63ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಸಾವಿನ ಸಂಖ್ಯೆ 11 ಸಾವಿರ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.