ಮುಂಬೈ: ಅಪೆಕ್ಸ್ ಸಮಿತಿಯ ಸದಸ್ಯರು ವಾಂಖೆಡೆ ಕ್ರೀಡಾಂಗಣ ಪ್ರವೇಶಿಸಬೇಕಾದರೆ ಕೋವಿಡ್–19 ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಹೊಂದಿರಬೇಕು ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್–ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಸೇರಿದಂತೆ ಇಲ್ಲಿ ಐಪಿಎಲ್ ಟೂರ್ನಿಯ 10 ಹಣಾಹಣಿಗಳು ಇಲ್ಲಿ ನಡೆಯಲಿವೆ.
‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯ ಪ್ರಕಾರ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಬರುವ ಎಲ್ಲ ಅಧಿಕಾರಿಗಳು ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ತರಬೇಕು’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ನಾಯಕ್ ತಿಳಿಸಿದ್ದಾರೆ.
‘ಲಸಿಕೆ ಹಾಕಿಸಿಕೊಂಡವರು ಕೂಡ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗಬೇಕು. ಕ್ರೀಡಾಂಗಣದ ಒಳಗೆ ಪ್ರವೇಶಿಸುವಾಗ ವರದಿಯನ್ನು ತೋರಿಸಬೇಕು’ ಎಂದು ಅವರು ವಿವರಿಸಿದರು.
ವಾಂಖೆಡೆ ಕ್ರೀಡಾಂಗಣದ 10 ಸಿಬ್ಬಂದಿಗೆ ಈಗಾಗಲೇ ಕೋವಿಡ್ ಸೋಂಕು ತಗುಲಿತ್ತು. ಆದರೆ ನಂತರ ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.