ADVERTISEMENT

ಕ್ರಿಕೆಟ್‌: ಮಣಿಪುರ ತಂಡಕ್ಕೆ ಮಹತ್ವದ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 19:56 IST
Last Updated 22 ಡಿಸೆಂಬರ್ 2018, 19:56 IST

ಕೋಲ್ಕತ್ತ: ಶನಿವಾರ ಇಲ್ಲಿ ಆರಂಭವಾದ ಮಣಿಪುರ ಮತ್ತು ಅರುಣಾಚಲ ಪ್ರದೇಶ ತಂಡಗಳ ನಡುವಣ ರಣಜಿ ಟ್ರೋಫಿ ಪ್ಲೇಟ್‌ ಗುಂಪಿನ ಪಂದ್ಯದ 23 ವಿಕೆಟ್‌ಗಳು ಪತನವಾದವು. ಮಣಿಪುರ 211 ರನ್‌ಗಳ ಮಹತ್ವದ ಮುನ್ನಡೆ ಗಳಿಸಿದೆ.

ಪಂದ್ಯದ ಮೊದಲ ದಿನವೇ ನಾಟಕೀಯ ತಿರುವುಗಳನ್ನು ಕಂಡ ಪಂದ್ಯದಲ್ಲಿ ಮಣಿಪುರ ತಂಡವು ಪುಟಿದೆದ್ದಿತು. ಮೊದಲ ಇನಿಂಗ್ಸ್‌ನಲ್ಲಿ 85 ರನ್‌ಗಳಿಗೆ ಆಲೌಟ್ ಆಗಿತ್ತು. ಮಣಿಪುರ ತಂಡವು ಅರುಣಾಚಲ ಪ್ರದೇಶವನ್ನು 66 ರನ್‌ಗಳಿಗೆ ಆಲೌಟ್ ಮಾಡಿತು. ತೊಕೊಮ್ ಸಿಂಗ್ ಐದು ಮತ್ತು ಬಿಸ್ವಜೀತ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಎರಡನೇ ಇನಿಂಗ್ಸ್‌ ಆರಂಭಿಸಿದ ಮಣಿಪುರಕ್ಕೆ ಹೃತಿಕ್ ಕನೋಜಿಯಾ (ಬ್ಯಾಟಿಂಗ್ 79 ) ಮತ್ತು ಯಶಪಾಲ್ ಸಿಂಗ್ (51 ರನ್) ಅರ್ಧಶತಕ ಗಳಿಸಿ ಆಸರೆಯಾದರು.

ಸಂಕ್ಷಿಪ್ತ ಸ್ಕೋರು

ADVERTISEMENT

ಮೊದಲ ಇನಿಂಗ್ಸ್‌: ಮಣಿಪುರ 26 ಓವರ್‌ಗಳಲ್ಲಿ 85 (ದೀನದಯಾಳ್ ಉಪಾಧ್ಯಾಯ 38ಕ್ಕೆ5, ಲಿಚಾ ತೆಹಿ 36ಕ್ಕೆ3, ತೆಚಿ ಡೊರಿಯಾ 1ಕ್ಕೆ2),

ಅರುಣಾಚಲಪ್ರದೇಶ: 23.3 ಓವರ್‌ಗಳಲ್ಲಿ 66 (ತೊಕೊಮ್ ಸಿಂಗ್ 16ಕ್ಕೆ5, ಬಿಸ್ವಜಿತ್ ಕೊಂತುಜಮ್ 27ಕ್ಕೆ4) ಎರಡನೇ ಇನಿಂಗ್ಸ್‌: 36 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 192 (ಹೃತಿಕ್ ಕನೋಜಿಯಾ ಬ್ಯಾಟಿಂಗ್ 79, ಯಶಪಾಲ್ ಸಿಂಗ್ 51)

ಬಿಹಾರ್‌: 46.1 ಓವರ್‌ಗಳಲ್ಲಿ 150 (ಹರ್ಷ ಸಿಂಗ್ ಔಟಾಗದೆ 48, ರಚಿತ್ ಭಾಟಿಯಾ 44ಕ್ಕೆ 6, ನಾಗಾಲ್ಯಾಂಡ್ 101ಕ್ಕೆ4).

ಎಲೀಟ್ ಗುಂಪು: ಮುಂಬೈ: 5 ವಿಕೆಟ್‌ಗಳಿಗೆ 334 (ಜೈ ಬಿಸ್ಟಾ 127, ವಿಕ್ರಾಂತ್ ಔಟಿ 57, ಸಿದ್ಧೇಶ್ ಲಾಡ್ ಔಟಾಗದೆ 84, ಶಿವಂ ದುಬೆ ಔಟಾಗದೆ 34, ಧರ್ಮೇಂದ್ರಸಿಂಹ ಜಡೇಜ 89ಕ್ಕೆ3) ಸೌರಾಷ್ಟ್ರದ ಎದುರು.

ಮಹಾರಾಷ್ಟ್ರ: 239 (ರಾಹುಲ್ ತ್ರಿಪಾಠಿ 102, ಸ್ವಪ್ನಿಲ್ ಗುಗಳೆ 35, ವಿಶಾಲ್ ಸಿಂಗ್ 59ಕ್ಕೆ4), ಛತ್ತೀಸಗಡ: 3 ವಿಕೆಟ್‌ಗಳಿಗೆ 23 (ಹರ್‌ಪ್ರೀತ್ ಸಿಂಗ್ ಭಾಟಿಯಾ ಔಟಾಗದೆ 13, ಅನುಪಮ್ ಸಂಕ್ಲೇಚಾ 11ಕ್ಕೆ3)

ಗುಜರಾತ್: 6 ವಿಕೆಟ್‌ಗಳಿಗೆ 263 (ಕೇತನ್ ಪಟೇಲ್ 105, ಧ್ರುವ ರಾವಳ್ ಔಟಾಗದೆ 69, ಆದಿತ್ಯ ಸರವಟೆ 57ಕ್ಕೆ2) ವಿದರ್ಭ ಎದುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.