ADVERTISEMENT

ಕ್ರಿಕೆಟ್‌: ಶಿವವಿಲಾಸ ನಗರ ತಂಡಕ್ಕೆ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 13:53 IST
Last Updated 10 ಏಪ್ರಿಲ್ 2021, 13:53 IST
ಶಕ್ತಿನಗರ ಬಳಿಯ ಚಿಕ್ಕಸೂಗೂರುನಲ್ಲಿ ಈಚೆಗೆ ನಡೆದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶಿವವಿಲಾಸ ನಗರದ ತಂಡ ಜಯಗಳಿಸಿ ಟ್ರೋಫಿ ಪಡೆಯಿತು
ಶಕ್ತಿನಗರ ಬಳಿಯ ಚಿಕ್ಕಸೂಗೂರುನಲ್ಲಿ ಈಚೆಗೆ ನಡೆದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶಿವವಿಲಾಸ ನಗರದ ತಂಡ ಜಯಗಳಿಸಿ ಟ್ರೋಫಿ ಪಡೆಯಿತು   

ಶಕ್ತಿನಗರ: ಚಿಕ್ಕಸೂಗೂರಿನ ವಿಸಿಸಿ ಸೀನಿಯರ್ ತಂಡದ ವಿರುದ್ಧ ಶಿವವಿಲಾಸ ನಗರದ ತಂಡವು ಜಯಗಳಿಸಿ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಚಿಕ್ಕಸೂಗೂರ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡ, ವಿಸಿಸಿ ಸೀನಿಯರ್ ತಂಡ 12 ಓವರ್‌ಗಳಲ್ಲಿ 6 ವಿಕೆಟ್ ಕಳೆದು ಕೊಂಡು 90 ರನ್‌ ಗಳಿಸಿತು.

ಶಿವವಿಲಾಸ ನಗರದ ತಂಡ 10.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 91 ರನ್ ಮಾಡುವ ಮೂಲಕ ಜಯಗಳಿಸಿ ಟೂರ್ನಿಯ ಚಾಂಪಿಯನ್ ಟ್ರೋಪಿ ಪಡೆದರು. ವಿಜೇತರಾದ ತಂಡಕ್ಕೆ ಮುಖಂಡರಾದ ಅಂಬಯ್ಯಗೌಡ, ಸೂಗೂರೆಡ್ಡಿ ಮತ್ತು ಆಂಜನೇಯ ಪೂಜಾರಿ ಅವರು ಬಹುಮಾನ ವಿತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.