ADVERTISEMENT

Rinku Singh Love Story: ಪ್ರೇಮಕಥೆ ಹಂಚಿಕೊಂಡ ಕ್ರಿಕೆಟಿಗ ರಿಂಕು ಸಿಂಗ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2025, 10:04 IST
Last Updated 26 ಆಗಸ್ಟ್ 2025, 10:04 IST
<div class="paragraphs"><p>ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್</p></div>

ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್

   

ಲಖನೌ: ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕ್ರಿಕೆಟಿಗ ರಿಂಕು ಸಿಂಗ್ ಅವರು, ತಮ್ಮ ಪ್ರೇಮಕಥೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ಇದೇ ವರ್ಷ ಜೂನ್‌ನಲ್ಲಿ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್‌ ತಮ್ಮ ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ADVERTISEMENT

ತಮ್ಮ ಪ್ರೇಮಕಥೆ ಬಗ್ಗೆ ನ್ಯೂಸ್‌24 ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿದ ರಿಂಕು ಸಿಂಗ್, ಪ್ರಿಯಾ ಅವರನ್ನು ಮೊದಲ ಬಾರಿ ನೋಡಿದಾಗ ಮುಂದೆ ಇವರೇ ನನ್ನ ಬಾಳಸಂಗಾತಿ ಆಗಬೇಕು ಎಂಬ ಭಾವನೆ ಮೂಡಿತ್ತು ಎಂದಿದ್ದಾರೆ.

‘ಇವೆಲ್ಲ ಶುರುವಾಗಿದ್ದು ಕೋವಿಡ್‌ ಕಾಲದಲ್ಲಿ. ಆಗ ಮುಂಬೈನಲ್ಲಿ ಐಪಿಎಲ್‌ ಪ್ರಾರಂಭವಾಗಿತ್ತು. ಅವರ(ಪ್ರಿಯಾ) ಅಭಿಮಾನಿಗಳ ಪೇಜ್‌ವೊಂದರಲ್ಲಿ ಮೊದಲ ಬಾರಿಗೆ ಅವರ ಫೋಟೊವನ್ನು ನೋಡಿದ್ದೆ. ಆಗಲೇ ಅವರು ನನಗೆ ಸರಿಯಾದ ಜೋಡಿ ಎನಿಸಿತ್ತು. ಆದರೆ, ಈ ಬಗ್ಗೆ ಅವರಲ್ಲಿ ಮಾತನಾಡಲು ಹಿಂಜರಿಕೆಯಾಗಿತ್ತು’ ಎಂದು ಹೇಳಿದ್ದಾರೆ.

‘ಇದಾದ ಬಳಿಕ ಒಂದು ದಿನ ಇನ್‌ಸ್ಟಾಗ್ರಾಂನಲ್ಲಿ ನನ್ನ ಫೋಟೊಗಳಿಗೆ ಅವರು ಲೈಕ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಅವರಿಗೆ ಸಂದೇಶ ಕಳುಹಿಸಿದೆ. ಹೀಗೆ ನಮ್ಮ ಪಯಣ ಪ್ರಾರಂಭವಾಯಿತು’ ಎಂದು ಹೇಳಿದ್ದಾರೆ.

‘ಆ ದಿನಗಳಲ್ಲಿ ನಾವು ಪ್ರತಿದಿನ ಕರೆ ಮಾಡಿ ಮಾತನಾಡುತ್ತಿದ್ದೆವು. ಪಂದ್ಯ ಮುಗಿದ ಮೇಲೂ ಅವರೊಂದಿಗೆ ಮಾತನಾಡುತ್ತಿದ್ದೆ. 2022ರ ವೇಳೆ ಸಂಪೂರ್ಣವಾಗಿ ಪ್ರೀತಿಯಲ್ಲಿ ಬಿದ್ದಿದ್ದೆ’ ಎಂದು ತಿಳಿಸಿದ್ದಾರೆ.

‘ಪ್ರಿಯಾ ಸಂಸದೆಯಾಗಿ ಆಯ್ಕೆ ಆಗುವವರೆಗೂ ನಾವು ತುಂಬಾ ಮಾತನಾಡುತ್ತಿದ್ದೆವು. ಈಗ ಇಬ್ಬರಿಗೂ ಜವಾಬ್ದಾರಿಯಿದೆ. ಆದ್ದರಿಂದ ಮಾತನಾಡುವುದು ಕಡಿಮೆ ಮಾಡಿದ್ದೇವೆ. ಅದಾಗ್ಯೂ ಪ್ರತಿ ದಿನ ರಾತ್ರಿ ಮಾತನಾಡುತ್ತೇವೆ. ನಮ್ಮ ‍ಪ್ರೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ’ ಎಂದಿದ್ದಾರೆ.

2026ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.