ADVERTISEMENT

ಬಿಸಿಸಿಐ ಒಂಬುಡ್ಸ್‌ಮನ್‌ ಆಗಿ ಜೈನ್‌ ಮುಂದುವರಿಕೆ

ಪಿಟಿಐ
Published 16 ಜೂನ್ 2020, 22:33 IST
Last Updated 16 ಜೂನ್ 2020, 22:33 IST
ಬಿಸಿಸಿಐ- ಸಾಂದರ್ಭಿಕ ಚಿತ್ರ
ಬಿಸಿಸಿಐ- ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒಂಬುಡ್ಸ್‌ಮನ್‌ ಹಾಗೂ ನೀತಿ ಅಧಿಕಾರಿಯಾಗಿರುವ ಡಿ.ಜೆ.ಜೈನ್‌ ಅವರು ಇನ್ನೊಂದು ವರ್ಷ ಈ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.

2019ರ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್‌, ಜೈನ್‌ ಅವರನ್ನು ಬಿಸಿಸಿಐ ಒಂಬುಡ್ಸ್‌ಮನ್‌ ಆಗಿ ನೇಮಿಸಿತ್ತು. ಬಳಿಕ ನೀತಿ ಅಧಿಕಾರಿಯ ಜವಾಬ್ದಾರಿಯೂ ಅವರ ಹೆಗಲೇರಿತ್ತು. ಈ ವರ್ಷದ ಫೆಬ್ರುವರಿ 29ರಂದು ಅವರ ಅಧಿಕಾರಾವಧಿ ಕೊನೆಗೊಂಡಿತ್ತು.

ಹೋದ ವಾರ ಬಿಸಿಸಿಐ, ಜೈನ್‌ ಜೊತೆಗಿನ ಒಪ್ಪಂದವನ್ನು ನವೀಕರಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.