ADVERTISEMENT

ಒಲಿಂಪಿಕ್ಸ್‌: ಜಿಮ್ನಾಸ್ಟಿಕ್ಸ್‌ ನಿರ್ಣಾಯಕರಾಗಿ ದೀಪಕ್ ಕಾಬ್ರಾ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 16:41 IST
Last Updated 13 ಜುಲೈ 2021, 16:41 IST
--
--   

ನವದೆಹಲಿ (ಪಿಟಿಐ): ಟೋಕಿಯೊ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯಲ್ಲಿ ಭಾರತದ ದೀಪಕ್ ಕಾಬ್ರಾ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಕಾರ್ಯಕ್ಕೆ ಆಯ್ಕೆಯಾದ ಮೊದಲ ಭಾರತೀಯ ದೀಪಕ್ ಆಗಿದ್ದಾರೆ. ಪುರುಷರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

‘ಹೋದ ವರ್ಷದ ಮಾರ್ಚ್‌ನಲ್ಲಿ ನನಗೆ ಅಹ್ವಾನ ಸಿಕ್ಕಿತ್ತು. ಆದರೆ, ಒಲಿಂಪಿಕ್ಸ್‌ ಮುಂದೂಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಕಾದಿದ್ದೆ. ಕೊನೆಗೂ ಒಲಿಂಪಿಕ್ಸ್‌ಗೆ ಹೋಗುವ ಕನಸು ನನಸಾಗಿದೆ‘ ಎಂದು 33 ವರ್ಷದ ದೀಪಕ್ ಹೇಳಿದ್ದಾರೆ.

ADVERTISEMENT

‘12ನೇ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್‌ ಆರಂಭಿಸಿದೆ. ನಮ್ಮ ಊರು ಸೂರತ್‌ನಲ್ಲಿ ಜಿಮ್ನಾಸ್ಟಿಕ್ಸ್‌ ಸೌಲಭ್ಯಗಳು ಹೆಚ್ಚು ಇರಲಿಲ್ಲ. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. 2007ರಲ್ಲಿ ಗುವಾಹತಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ‘ ಎಂದು ಹೇಳಿದರು. 2005ರಿಂದ 2009ರವರೆಗೆ ಅವರು ಗುಜರಾತ್ ರಾಜ್ಯದ ಚಾಂಪಿಯನ್ ಆಗಿದ್ದರು.

2010ರಲ್ಲಿ ಭಾರತದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಭಾಗವಹಿಸಿದ್ದರು. 2014ರಲ್ಲಿ ಏಷ್ಯನ್‌ ಗೇಮ್ಸ್‌ ಮತ್ತು ಯೂತ್ ಒಲಿಂಪಿಕ್ಸ್‌ನಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. 2018ರ ಏಷ್ಯನ್ ಮತ್ತು ಕಾಮನ್‌ವೆಲ್ತ್‌ ಕೂಟಗಳಲ್ಲಿಯೂ ಅವರು ನಿರ್ಣಾಯಕರಾಗಿದ್ದರು. ಅದೇ ವರ್ಷ ಯೂತ್ ಒಲಿಂಪಿಕ್ಸ್‌ನಲ್ಲಿಯೂ ಅವರು ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.