ADVERTISEMENT

ವಿಶ್ವ ಲೆಜೆಂಡ್ಸ್ ಪ್ರೊ ಟಿ–20 ಲೀಗ್‌; ದೆಹಲಿ ವಾರಿಯರ್ಸ್‌ಗೆ ಭರ್ಜರಿ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 11:12 IST
Last Updated 27 ಜನವರಿ 2026, 11:12 IST
   

ಗೋವಾ: ವಿಶ್ವ ಲೆಜೆಂಡ್ಸ್ ಪ್ರೊ ಟಿ–20 ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ದುಬೈ ರಾಯಲ್ಸ್ ವಿರುದ್ಧ ದೆಹಲಿ ವಾರಿಯರ್ಸ್‌ ತಂಡವು 9 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಗೋವಾದ 1919 ಸ್ಪೋರ್ಟ್ಸ್ ಮೈದಾನಲ್ಲಿ ನಡೆದ ಪಂದ್ಯದಲ್ಲಿ ಒಟ್ಟು 394 ರನ್‌ಗಳು ದಾಖಲಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ದುಬೈ ರಾಯಲ್ಸ್ ತಂಡವು ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಕರ್ಕ್ ಎಡ್ವರ್ಡ್ಸ್ ಅವರ ಸ್ಪೋಟಕ ಆಟದ ನೆರವಿನಿಂದ 196 ರನ್‌ ಗಳಿಸಿತು.

ADVERTISEMENT

ದೆಹಲಿ ವಾರಿಯರ್ಸ್‌ ಪರ ಸುಬೋಧ್ ಭಾಟಿ 37 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು.

197 ರನ್‌ ಗುರಿ ಬೆನ್ನಟ್ಟಿದ ದೆಹಲಿ ವಾರಿಯರ್ಸ್‌ ತಂಡಕ್ಕೆ ಚಾಡ್‌ವಿಕ್ ವಾಲ್ಟನ್ ಅವರು ಆಸರೆಯಾದರು. ಉದ್ಘಾಟನಾ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದರು.

ವಾಲ್ಟನ್ ಹಾಗೂ ಶ್ರೀವತ್ಸ ಗೋಸ್ವಾಮಿ(56 ರನ್) ಅವರು ಮೊದಲ ವಿಕೆಟ್‌ಗೆ 159 ರನ್‌ಗಳ ಭರ್ಜರಿ ಜೊತೆಯಾಟ ಆಡಿದರು. ದೆಹಲಿ ವಾರಿಯರ್ಸ್‌ ತಂಡವು 16.3 ಓವರ್‌ಗಳಲ್ಲಿ ಗುರಿ ತಲುಪಿತು.

ಕ್ರಿಸ್ ಗೇಲ್, ಮಾರ್ಟಿನ್ ಗಪ್ಟಿಲ್, ಶೇನ್ ವಾಟ್ಸನ್, ಸುರೇಶ್ ರೈನಾ, ಜೆಪಿ ಡುಮಿನಿ, ಸ್ಟುವರ್ಟ್ ಬ್ರಾಡ್ ಸೇರಿದಂತೆ ಅನೇಕ ದಿಗ್ಗಜ ಕ್ರಿಕೆಟಿಗರು ವಿಶ್ವ ಲೆಜೆಂಡ್ಸ್ ಪ್ರೊ ಟಿ–20 ಲೀಗ್‌ನಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.