ADVERTISEMENT

1 ರನ್‌ ನೀಡಿ 6 ವಿಕೆಟ್ ಉರುಳಿಸಿದ ದಿಲೀಪ್‌: ಮಾಲೂರು ತಂಡಕ್ಕೆ ‘ವಿಜಯ‘

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 5:14 IST
Last Updated 3 ಡಿಸೆಂಬರ್ 2020, 5:14 IST
ಕ್ರಿಕೆಟ್
ಕ್ರಿಕೆಟ್   

ಬೆಂಗಳೂರು: ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದ ದಿಲೀಪ್ ಕುಮಾರ್ (1ಕ್ಕೆ6) ಅವರು ಮಾಲೂರಿನ ವಿಜಯ ಕ್ರಿಕೆಟ್ ಕ್ಲಬ್ ಭರ್ಜರಿ ಜಯ ಗಳಿಸಲು ಕಾರಣರಾದರು. ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌ ಎದುರು ನಡೆದ ವೈ.ಎಸ್.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವಿಜಯ ಕ್ಲಬ್ 10 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ವಿಶ್ವೇಶ್ವರಪುರಂ ತಂಡ ದಿಲೀಪ್‌ ದಾಳಿಗೆ ನಲುಗಿ 26 ರನ್‌ಗಳಿಗೆ ಪತನಗೊಂಡಿತು. 4.5 ಓವರ್‌ಗಳಲ್ಲಿ ವಿಜಯ ಕ್ರಿಕೆಟ್ ಕ್ಲಬ್ ಗುರಿ ಮುಟ್ಟಿತು.

ಸಂಕ್ಷಿಪ್ತ ಸ್ಕೋರು: ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌: 16. 3 ಓವರ್‌ಗಳಲ್ಲಿ 26 (ದಿಲೀಪ್ ಕುಮಾರ್ 1ಕ್ಕೆ6, ಧ್ರುವ ಪ್ರಭಾಕರ್ 6ಕ್ಕೆ3); ವಿಜಯ ಕ್ರಿಕೆಟ್ ಕ್ಲಬ್‌: 4.5 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 27.

ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 9ಕ್ಕೆ 292 (ನಾಗ ಭರತ್ 66, ಅಮನ್ ಖಾನ್ 79; ಮನೀಷ್ 53ಕ್ಕೆ3, ಧೀರಜ್ ಗೌಡ್ 74ಕ್ಕೆ4); ಸೆಂಚುರಿ ಕ್ರಿಕೆಟರ್ಸ್‌: 36.5 ಓವರ್‌ಗಳಲ್ಲಿ 142 (ವೃಜೇಶ್‌ 48; ಪ್ರಶಾಂತ್ 26ಕ್ಕೆ2, ನಾಗ ಭರತ್ 11ಕ್ಕೆ5, ಅಮನ್ 11ಕ್ಕೆ2). ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 150 ರನ್‌ಗಳ ಜಯ.

ADVERTISEMENT

ವಿಕ್ಟರಿ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 152 (ನಿತೇಶ್ ಗೌಡ್ 39; ಅಭಿಷೇಕ್ 27ಕ್ಕೆ2, ಅಭಿಜಿತ್ 14ಕ್ಕೆ2); ವಿಜಯ ಕ್ರಿಕೆಟ್ ಕ್ಲಬ್: 23.5 ಓವರ್‌ಗಳಲ್ಲಿ 7ಕ್ಕೆ 153 (ಶಿವರಾಜ್ 35, ಅಭಿಜಿತ್ 43; ಕೌಶಿಕ್ 46ಕ್ಕೆ2, ಸಾತ್ವಿಕ್ 38ಕ್ಕೆ2, ವಿಶಾಲ್ 22ಕ್ಕೆ2). ಫಲಿತಾಂಶ: ವಿಜಯ ಕ್ರಿಕೆಟ್ ಕ್ಲಬ್‌ಗೆ 3 ವಿಕೆಟ್‌ಗಳ ಗೆಲುವು.

ಫ್ರೆಂಡ್ಸ್‌ ಇಲೆವನ್ ಕ್ರಿಕೆಟ್ ಕ್ಲಬ್‌: 41 ಓವರ್‌ಗಳಲ್ಲಿ 109 (ವಿದ್ವತ್ ಕಾವೇರಪ್ಪ 11ಕ್ಕೆ5, ಕುಶಲ್ ವಾಧ್ವಾನಿ 22ಕ್ಕೆ3); ಸರ್‌ ಸೈಯದ್ ಕ್ರಿಕೆಟರ್ಸ್: 14 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 (ಲುವನೀತ್ ಸಿಸೋಡಿಯಾ 30; ರೋಹನ್ ರಾಜು 43ಕ್ಕೆ2). ಸರ್‌ ಸೈಯದ್‌ ಕ್ರಿಕೆಟರ್ಸ್‌ಗೆ 8 ವಿಕೆಟ್‌ಗಳ ಜಯ. ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 8ಕ್ಕೆ 452 (ಶರತ್ ಬಿ.ಆರ್ 138, ಆಕಾಶ್‌ ರಾವ್ 101; ರಾಕೇಶ್ 61ಕ್ಕೆ3, ಉಜ್ವಲ್ 83ಕ್ಕೆ2); ಐಐಎಸ್‌ಸಿ ಜಿಮ್ಖಾನಾ: 27.2 ಓವರ್‌ಗಳಲ್ಲಿ 84 (ಶರಣ್ ಗೌಡ್ 21ಕ್ಕೆ3, ಶೀತಲ್ 20ಕ್ಕೆ3). ಫಲಿತಾಂಶ: ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್‌ಗೆ 368 ರನ್‌ಗಳ ಜಯ.

ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 7ಕ್ಕೆ 264 (ರೋಹನ್ ಕದಂ 41, ಲಿಯಾನ್ ಖಾನ್ 32, ತುಷಾರ್‌ ಸಿಂಗ್ 86, ಪ್ರಣವ್ ಭಾಟಿಯಾ 57; ಪ್ರಥಮ್ 44ಕ್ಕೆ2); ಕ್ಯಾವಲಿಯರ್ಸ್‌ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 9ಕ್ಕೆ 221 (ಪ್ರವೇಶ್ ಗೌಡ್ 91, ಗೋವಿಂದಪ್ಪ 51; ಆದಿತ್ಯ ಗೋಯಲ್ 33ಕ್ಕೆ4). ಫಲಿತಾಂಶ: ಬೆಂಗಳೂರು ಯುನೈಟೆಡ್‌ಗೆ 43 ರನ್‌ಗಳ ಜಯ.

ಜುಪಿಟರ್ ಕ್ರಿಕೆಟರ್ಸ್ ಅಸೋಸಿಯೇಷನ್‌: 50 ಓವರ್‌ಗಲ್ಲಿ 9ಕ್ಕೆ 261 (ಸುಹಾಸ್ 71, ಅಚ್ಯುತ 79, ಸೌರಭ್ ಗೋಡಬೋಲೆ 40; ಪ್ರಜ್ವಲ್ ಕೃಷ್ಣ 38ಕ್ಕೆ3, ಅಬುಲ್ ಹಸನ್ ಖಲೀದ್ 50ಕ್ಕೆ2, ಮೊಹಮ್ಮದ್ ಸೈಫ್‌ 65ಕ್ಕೆ2); ಬೆಂಗಳೂರು ಅಕೇಷನಲ್ಸ್‌: 42.3 ಓವರ್‌ಗಳಲ್ಲಿ 5ಕ್ಕೆ 265 (ನಿತಿನ್ 74, ಮೊಹಮ್ಮದ್ ಸೈಫ್ 40, ಸುಮಿತ್ ಧವನಿ ಔಟಾಗದೆ 52, ಶ್ರೀಹರಿ ಔಟಾಗದೆ 35; ಸೌರಭ್ ಗೋಡಬೋಲೆ 26ಕ್ಕೆ2). ಫಲಿತಾಂಶ: ಬೆಂಗಳೂರು ಅಕೇಷನಲ್ಸ್‌ಗೆ 5 ವಿಕೆಟ್‌ಗಳ ಜಯ.

ರಾಜಾಜಿನಗರ ಕ್ರಿಕೆಟರ್ಸ್: 37.4 ಓವರ್‌ಗಳಲ್ಲಿ 143 (ನಿಹಾಲ್ ಉಳ್ಳಾಲ 53, ಫರ್ಹಾನ್ 57; ಡ್ಯಾನಿಷ್‌ 32ಕ್ಕೆ3, ಭರತ್ ಕೊಂಡಜ್ಜಿ 12ಕ್ಕೆ3, ಮೊಹಸಿನ್ ಖಾನ್ 20ಕ್ಕೆ2); ಹೆರಾನ್ಸ್‌ ಕ್ರಿಕೆಟ್ ಕ್ಲಬ್‌: 37.1 ಓವರ್‌ಗಳಲ್ಲಿ 107 (ವಿಶಾಲ್ 35; ನಿಶ್ಚಿತ್ ರಾವ್ 23ಕ್ಕೆ2, ಶಮಂತ್ 17ಕ್ಕೆ3, ಅಮೇಯ 18ಕ್ಕೆ3). ಫಲಿತಾಂಶ: ರಾಜಾಜಿನಗರ ಕ್ರಿಕೆಟರ್ಸ್‌ಗೆ 36 ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.