ADVERTISEMENT

ಟೆಸ್ಟ್‌ ಕ್ರಿಕೆಟ್‌: ಶ್ರೀಲಂಕಾ ನೆರವಿಗೆ ದಿಮುತ್‌

ರಾಯಿಟರ್ಸ್
Published 22 ಆಗಸ್ಟ್ 2019, 19:45 IST
Last Updated 22 ಆಗಸ್ಟ್ 2019, 19:45 IST

ಕೊಲಂಬೊ: ಶ್ರೀಲಂಕಾ ತಂಡ, ಗುರುವಾರ ಕೊಲಂಬೊದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆರಂಭವಾದ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನ 2 ವಿಕೆಟ್‌ಗೆ 85 ರನ್‌ ಗಳಿಸಿತು. ಮಳೆ ಮತ್ತು ಮಂದ ಬೆಳಕಿನಿಂದಾಗಿ 36.3 ಓವರುಗಳಷ್ಟೇ ಸಾಧ್ಯವಾಗಿದ್ದು ಆತಿಥೇಯ ತಂಡ ಲಾಹಿರು ತಿರಿಮಾನ್ನೆ ಮತ್ತು ಕುಶಲ್‌ ಮೆಂಡಿಸ್‌ ಅವರು ವಿಕೆಟ್‌ ಕಳೆದುಕೊಂಡಿತು.

ನಾಯಕ ದಿಮುತ್‌ ಕರುಣಾರತ್ನೆ ಮೊದಲ ಟೆಸ್ಟ್‌ನ ಉತ್ತಮ ಆಟವನ್ನು ಮುಂದುವರಿಸಿದ್ದು, 49 ರನ್‌ಗಳೊಡನೆ ಅಜೇಯರಾಗಿ ಉಳಿದಿದ್ದಾರೆ. ಅವರು ಎರಡನೇ ವಿಕೆಟ್‌ಗೆ ಕುಶಲ್‌ ಮೆಂಡಿಸ್‌ (32) ಜೊತೆ 50 ರನ್‌ ಸೇರಿಸಿದರು. ಕುಶಲ್‌, ಆಲ್‌ರೌಂಡರ್‌ ಕಾಲಿನ್ ಡಿ ಗ್ರಾಂಡ್‌ಹೋಮ್‌ ಅವರಿಗೆ ಬಲಿಯಾದರು. ಇದಕ್ಕೆ ಮೊದಲು.ಆಫ್‌ ಸ್ಪಿನ್ನರ್‌ ವಿಲಿಯಂ ಸಾಮರ್‌ವಿಲ್‌, ಆರಂಭ ಆಟಗಾರ ಲಾಹಿರು ತಿರಿಮಾನ್ನೆ ವಿಕೆಟ್‌ ಪಡೆದಿದ್ದರು.

ಶ್ರೀಲಂಕಾ ತಂಡ, ಅಕ್ರಮ ಬೌಲಿಂಗ್‌ ಶೈಲಿ ಆರೋಪ ಎದುರಿಸುತ್ತಿರುವ ಆಫ್‌ ಸ್ಪಿನ್ನರ್‌ ಅಖಿಲ ಧನಂಜಯ ಅವರನ್ನು ಕೈಬಿಟ್ಟು ದಿಲ್ರುವಾನ್‌ ಪೆರೀರಾ ಅವರನ್ನು ಆಡಿಸುತ್ತಿದೆ.

ADVERTISEMENT

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 1ನೇ ಇನಿಂಗ್ಸ್‌: 36.3 ಓವರುಗಳಲ್ಲಿ 2 ವಿಕೆಟ್‌ಗೆ 85 (ದಿಮುತ್‌ ಕರುಣಾರತ್ನೆ ಬ್ಯಾಟಿಂಗ್‌ 49, ಕುಶಲ್‌ ಮೆಂಡಿಸ್‌ 32) ವಿರುದ್ಧ ನ್ಯೂಜಿಲೆಂಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.