ADVERTISEMENT

ಜನವರಿ 5ರಿಂದ ರಣಜಿ ಟ್ರೋಫಿ ಟೂರ್ನಿ

ಜೂನ್ 28ರಿಂದ ದೇಶಿ ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 11:36 IST
Last Updated 10 ಏಪ್ರಿಲ್ 2023, 11:36 IST
--
--   

ನವದೆಹಲಿ: ದೇಶಿ ಕ್ರಿಕೆಟ್‌ ‘ರಾಜ’ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು ಮುಂದಿನ ವರ್ಷದ ಜನವರಿ 5ರಿಂದ ಆರಂಭವಾಗಲಿದೆ.

2023–24ನೇ ಸಾಲಿನ ದೇಶಿ ಕ್ರಿಕೆಟ್‌ ೃತು ಇದೇ ವರ್ಷದ ಜೂನ್ 28ರಂದು ಆರಂಭವಾಗಲಿದೆ. ಮೊದಲಿಗೆ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದೆ. ನಂತರ ದೇವಧರ್ ಟ್ರೋಫಿ ಲಿಸ್ಟ್ ಎ (ಜುಲೈ 24ರಿಂದ ಆಗಸ್ಟ್ 3), ಇರಾನಿ ಕಪ್ (ಅಕ್ಟೋಬರ್ 1 ರಿಂದ 5), ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪುರುಷರ ಟಿ20 ಕ್ರಿಕೆಟ್ (ಅ. 16 ರಿಂದ ನ.6) ಮತ್ತು ವಿಜಯ್ ಹಜಾರೆ ಟ್ರೋಫಿ (ನ 23 ರಿಂದ ಡಿ 15) ನಡೆಯಲಿವೆ.

ಇದರ ನಂತರ 2024ರ ಜನವರಿ 5 ರಿಂದ ಮಾರ್ಚ್ 14ರವರೆಗೆ ಒಟ್ಟು 70 ದಿನಗಳವರೆಗೆ ರಣಜಿ ಟ್ರೋಫಿ ಟೂರ್ನಿ ನಡೆಯಲಿದೆ. ಪ್ಲೇಟ್ ಗುಂಪಿನ ಲೀಗ್ ಪಂದ್ಯಗಳು ಜ. 5 ರಿಂದ ಫೆ. 5ರವರೆಗೆ ಆಯೋಜನೆಗೊಳ್ಳಲಿವೆ. ನಾಕೌಟ್ ಸುತ್ತಿನ ಪಂದ್ಯಗಳು ಫೆ. 9ರಿಂದ 22ರವರೆಗೆ ನಡೆಯುತ್ತವೆ.

ADVERTISEMENT

ಪ್ಲೇಟ್ ಗುಂಪಿನಲ್ಲಿ ಆರು ತಂಡಗಳೂ ಸ್ಪರ್ಧಿಸಲಿವೆ. ಈ ಪೈಕಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಈ ಗುಂಪಿನ ಸೆಮಿಫೈನಲ್‌ನಲ್ಲಿ ಆಡಲಿವೆ. ಫೈನಲ್ ಪ್ರವೇಶಿಸುವ ಎರಡು ತಂಡಗಳೂ ಎಲೀಟ್ ಗುಂಪಿಗೆ ಬಡ್ತಿ ಹೊಂದಲಿವೆ.

ಎಲೀಟ್ ಗುಂಪಿನಲ್ಲಿ ತಲಾ ಎಂಟು ತಂಡಗಳು ಆಡಲಿವೆ. ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳು ಕ್ವಾರ್ಟರ್‌ಫೈನಲ್‌ ಪ್ರವೇಶಿಸುತ್ತವೆ. ಕೊನೆಯ ಎರಡು ಸ್ಥಾನ ಪಡೆದ ತಂಡಗಳು ಪಾಯಿಂಟ್ಸ್, ಬೋನಸ್ ಪಾಯಿಂಟ್ಸ್, ಜಯ ಮತ್ತು ರನ್‌ ಸರಾಸರಿಯ ಆಧಾರದಲ್ಲಿ 2024–25ರ ರುತುವಿನ ಪ್ಲೇಟ್ ಗುಂಪಿಗೆ ಸೇರ್ಪಡೆಯಾಗುತ್ತವೆ.

ಮಹಿಳೆಯರ ರಾಷ್ಟ್ರೀಯ ಸೀನಿಯರ್ ಟಿ20 ಕ್ರಿಕೆಟ್ ಟೂರ್ನಿಯು ಅಕ್ಟೋಬರ್ 19 ರಿಂದ ನವೆಂಬರ್ 9ರವರೆಗೆ ನಡೆಯಲಿದೆ. ಅಂತರ ವಲಯ ಟಿ20 ಟ್ರೋಫಿ ಟೂರ್ನಿಯು ನವೆಂಬರ್ 24ರಿಂದ ಡಿಸೆಂಬರ್ 4ರವರೆಗೆ ಆಯೋಜನೆಗೊಂಡಿದೆ.

ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯು ಜನವರಿ 4 ರಿಂದ 26ರವರೆಗೆ ನಡೆಯಲಿದೆ.

ಮುಖ್ಯಾಂಶಗಳು

* ಜೂನ್ 28ರಿಂದ ದೇಶಿ ಕ್ರಿಕೆಟ್ ೃತು ಆರಂಭ

* ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಶುರುವಾಗಲಿರುವ ೃತು

* 2024ರ ಜನವರಿಯಲ್ಲಿ ರಣಜಿ ಟ್ರೋಫಿ ಟೂರ್ನಿ ಆರಂಭ

* ಒಟ್ಟು 70 ದಿನ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್

* ಪ್ಲೇಟ್ ಹಾಗೂ ಎಲೀಟ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.

* ರಣಜಿ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಸ್ಪರ್ಧಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.