ADVERTISEMENT

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ನಾಯಕತ್ವ ತೊರೆದ 'ಫಾಫ್‌ ಡು ಪ್ಲೆಸಿ'

ಏಜೆನ್ಸೀಸ್
Published 17 ಫೆಬ್ರುವರಿ 2020, 19:45 IST
Last Updated 17 ಫೆಬ್ರುವರಿ 2020, 19:45 IST
ಫಾಫ್‌ ಡು ಪ್ಲೆಸಿಸ್‌
ಫಾಫ್‌ ಡು ಪ್ಲೆಸಿಸ್‌   

ಜೊಹಾನ್ಸ್‌ಬರ್ಗ್‌: ಅನುಭವಿ ಆಟಗಾರ ಫಾಫ್‌ ಡು ಪ್ಲೆಸಿ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ನಾಯಕತ್ವ ತೊರೆದಿದ್ದಾರೆ. ಸೋಮವಾರ ಈ ನಿರ್ಧಾರ ಪ್ರಕಟಿಸಿದ್ದಾರೆ.

‘ತಂಡವನ್ನು ಮುನ್ನಡೆಸುವ ಅವಕಾಶ ಇತರ ಆಟಗಾರರಿಗೂ ಸಿಗಬೇಕು. ಹೀಗಾಗಿ ನೋವಿನಿಂದಲೇ ನಾಯಕತ್ವ ತ್ಯಜಿಸುತ್ತಿದ್ದೇನೆ’ ಎಂದು 35 ವರ್ಷ ವಯಸ್ಸಿನ ಪ್ಲೆಸಿ ಹೇಳಿದ್ದಾರೆ.‌

ಡು ಪ್ಲೆಸಿ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಹಿಂದಿನ ಋತುವಿನಲ್ಲಿ ನಡೆದಿದ್ದ ಹಲವು ಸರಣಿಗಳಲ್ಲಿ ಹೀನಾಯವಾಗಿ ಸೋತಿತ್ತು. ಹೀಗಾಗಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಮತ್ತು ಟ್ವೆಂಟಿ–20 ಸರಣಿಗಳಿಗೆ ಪ್ರಕಟಿಸಲಾಗಿದ್ದ ತಂಡಗಳಿಂದ ಅವರನ್ನು ಕೈಬಿಡಲಾಗಿತ್ತು. ಅವರ ಬದಲು ಕ್ವಿಂಟನ್‌ ಡಿ ಕಾಕ್‌ ತಂಡದ ಸಾರಥ್ಯ ವಹಿಸಿದ್ದರು.

ADVERTISEMENT

ಪ್ಲೆಸಿಸ್‌ ಅವರು 36 ಟೆಸ್ಟ್‌ ಸೇರಿದಂತೆ ಒಟ್ಟು 112 ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಹರಿಣಗಳ ತಂಡವನ್ನು ಮುನ್ನಡೆಸಿದ್ದರು.

‘2019ರ ವಿಶ್ವಕಪ್‌ ನಂತರ ಹಲವು ಅನುಭವಿ ಆಟಗಾರರು ನಿವೃತ್ತರಾದರು. ನೆರವು ಸಿಬ್ಬಂದಿಗಳೂ ತಂಡ ತೊರೆದರು. ಹೀಗಾಗಿ ತಂಡಕ್ಕೆ ಹೊಸ ರೂಪ ನೀಡುವ ಸವಾಲು ನನ್ನ ಎದುರಿಗಿತ್ತು. ಅದನ್ನು ಖುಷಿಯಿಂದಲೇ ಸ್ವೀಕರಿಸಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.