ADVERTISEMENT

Duleep Trophy|ಪಶ್ಚಿಮ ವಲಯಕ್ಕೆ ಶಾರ್ದೂಲ್‌ ನಾಯಕ;ಪ್ರಮುಖ ಬ್ಯಾಟರ್‌ಗಳಿಗೆ ಸ್ಥಾನ

ಪಿಟಿಐ
Published 1 ಆಗಸ್ಟ್ 2025, 10:45 IST
Last Updated 1 ಆಗಸ್ಟ್ 2025, 10:45 IST
   

ಮುಂಬೈ: ಭಾರತದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್‌ ಠಾಕೂರ್ ಅವರು ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡವನ್ನು ಮುನ್ನಡೆಸಲಿದ್ದಾರೆ.

ಶಾರ್ದೂಲ್‌ ಠಾಕೂರ್ ನಾಯಕತ್ವದ 15 ಆಟಗಾರರ ಪಟ್ಟಿಯನ್ನು ಪಶ್ಚಿಮ ವಲಯ ತಂಡವು ಬಿಡುಗಡೆಗೊಳಿಸಿದೆ.

ಭಾರತದ ಪ್ರಮುಖ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್, ಶ್ರೇಯಸ್‌ ಐಯ್ಯರ್, ಸರ್ಫರಾಜ್‌ ಖಾನ್ ಹಾಗೂ ಋತುರಾಜ್ ಗಾಯಕವಾಡ್ ಅವರು ತಂಡದಲ್ಲಿದ್ದಾರೆ.

ADVERTISEMENT

ಬೌಲರ್‌ಗಳಾದ ತನುಷ್‌ ಕೋಟ್ಯಾನ್‌, ತುಷಾರ್‌ ದೇಶಪಾಂಡೆ ಸೇರಿದಂತೆ ಪಶ್ಚಿಮ ವಲಯ ತಂಡದ 15 ಆಟಗಾರರಲ್ಲಿ 7 ಆಟಗಾರರು ಮುಂಬೈ ಮೂಲದವರಾಗಿದ್ದಾರೆ.

2025–26ನೇ ಸಾಲಿನ ದೇಶಿ ಕ್ರಿಕೆಟ್‌ ಪಂದ್ಯಗಳು ದುಲೀಪ್‌ ಟ್ರೋಫಿ ಮೂಲಕ ಆರಂಭವಾಗಲಿವೆ. ಈ ಬಾರಿ ಅಂತರ ವಲಯ ಮಾದರಿಯಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿಯಲ್ಲಿ ಆರು ತಂಡಗಳು ಕಣಕ್ಕಿಳಿಯಲಿವೆ. ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ನೇರ ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ.

ಪಶ್ಚಿಮ ವಲಯ ತಂಡ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್,  ಶಮ್ಸ್‌ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ  (ಎಲ್ಲರೂ ಮುಂಬೈನವರು),  ಆರ್ಯ ದೇಸಾಯಿ, ಜಯಮೀತ್ ಪಟೇಲ್, ಮನನ್ ಹಿಂಗರಜಿಯಾ, ಅರ್ಜನ್ ನಾಗವಾಸ್ವಾಲಾ  (ಎಲ್ಲರೂ ಗುಜರಾತ್), ಹಾರ್ವಿಕ್ ದೇಸಾಯಿ , ಧರ್ಮದರ್ಶಿನ್ ಜಡೇಜ (ವಿಕೆಟ್‌ಕೀಪರ್, ಸೌರಾಷ್ಟ್ರ), ಋತುರಾಜ್ ಗಾಯಕವಾಡ , ಸೌರಭ್ ನವಲೆ, (ಮಹಾರಾಷ್ಟ್ರ). ಮೀಸಲು ಆಟಗಾರರು: ಮಹೇಶ್ ಪಿತೀಯಾ, ಶಿವಾಲಿಕ್ ಶರ್ಮಾ (ಬರೋಡಾ), ಮುಕೇಶ್ ಚೌಧರಿ (ಮಹಾರಾಷ್ಟ್ರ),  ಸಿದ್ಧಾರ್ಥ್ ದೇಸಾಯಿ, ಚಿಂತನ್ ಗಜ, ಊರ್ವಿಲ್ ಪಟೇಲ್ (ಗುಜರಾತ್‌ನವರು), ಮುಷೀರ್ ಖಾನ್ (ಮುಂಬೈ). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.