ADVERTISEMENT

ಡ್ವೇನ್ ಬ್ರಾವೊ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನೂತನ ವಿಶ್ವ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2021, 10:41 IST
Last Updated 11 ಅಕ್ಟೋಬರ್ 2021, 10:41 IST
ಡ್ವೇನ್ ಬ್ರಾವೊ
ಡ್ವೇನ್ ಬ್ರಾವೊ   

ದುಬೈ: ಟ್ವೆಂಟಿ-20 ಕ್ರಿಕೆಟ್‌ ಮಾದರಿಯಲ್ಲಿ 550ನೇ ವಿಕೆಟ್‌ ಕಬಳಿಸಿರುವ ವೆಸ್ಟ್‌ಇಂಡೀಸ್‌ನ ಡ್ವೇನ್ ಬ್ರಾವೊ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬ್ರಾವೊ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ನೂತನ ಮೈಲಿಗಲ್ಲು ತಲುಪಿದರು.

ಇದರೊಂದಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 550 ವಿಕೆಟ್ ಗಳಿಸಿದ ವಿಶ್ವದ ಮೊತ್ತ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಏಕಮಾತ್ರ ಬೌಲರ್ ಬ್ರಾವೊ ಆಗಿದ್ದಾರೆ. 506ನೇ ಪಂದ್ಯದಲ್ಲಿ (479 ಇನ್ನಿಂಗ್ಸ್) ಬ್ರಾವೊ ಈ ದಾಖಲೆ ಬರೆದಿದ್ದಾರೆ.

ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಎರಡನೇ ಸ್ಥಾನದಲ್ಲಿದ್ದು, ಒಟ್ಟು 420 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಟ್ಟೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸರದಾರರು:
1. ಡ್ವೇನ್ ಬ್ರಾವೊ: 550
2. ಇಮ್ರಾನ್ ತಾಹೀರ್: 420
3. ಸುನಿಲ್ ನಾರಾಯಣ್: 419
4. ರಶೀದ್ ಖಾನ್: 392
5. ಲಸಿತ್ ಮಾಲಿಂಗ: 390

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.