ADVERTISEMENT

ಎಜ್‌ಬಾಸ್ಟನ್‌ ಅಂಗಳವೀಗ ಕೋವಿಡ್‌ ಪರೀಕ್ಷಾ ಕೇಂದ್ರ!

ಪಿಟಿಐ
Published 3 ಏಪ್ರಿಲ್ 2020, 19:30 IST
Last Updated 3 ಏಪ್ರಿಲ್ 2020, 19:30 IST
ಎಜ್‌ಬಾಸ್ಟನ್‌ ಕ್ರೀಡಾಂಗಣ –ಸಂಗ್ರಹ ಚಿತ್ರ
ಎಜ್‌ಬಾಸ್ಟನ್‌ ಕ್ರೀಡಾಂಗಣ –ಸಂಗ್ರಹ ಚಿತ್ರ   

ಲಂಡನ್‌: ಇಲ್ಲಿನ ಎಜ್‌ಬಾಸ್ಟನ್‌ ಕ್ರಿಕೆಟ್‌ ಮೈದಾನವು ಈಗ ಕೋವಿಡ್‌–19 ಪರೀಕ್ಷಾ ಕೇಂದ್ರವಾಗಿ ಮಾರ್ಪಾಡಾಗಲಿದೆ.

ಬರ್ಮಿಂಗ್‌ಹ್ಯಾಂ ಹಾಗೂ ವೆಸ್ಟ್‌ ಮಿಡ್‌ಲ್ಯಾಂಡ್ಸ್‌ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್‌ ಹೆಲ್ತ್‌ ಸರ್ವಿಸಸ್‌ನ (ಎನ್‌ಎಚ್‌ಎಸ್‌) ಸಿಬ್ಬಂದಿ, ಕ್ರೀಡಾಂಗಣದ ಕಾರು ನಿಲುಗಡೆ ಸ್ಥಳದಲ್ಲಿ ತಾತ್ಕಾಲಿಕವಾಗಿ ತಲೆ ಎತ್ತಲಿರುವ ‘ಡ್ರೈವ್‌ ಥ್ರೂ ಕೋವಿಡ್‌–19’ ಕೇಂದ್ರದಲ್ಲಿ ಪ್ರತಿನಿತ್ಯವೂ ಪರೀಕ್ಷೆಗೆ ಒಳಪಡಬೇಕು. ತಮಗೆ ಕೊರೊನಾ ಲಕ್ಷಣ ಇಲ್ಲವೆಂಬುದು ಖಾತ್ರಿಪಡಿಸಿಕೊಂಡ ಬಳಿಕ ರೋಗಿಗಳ ಆರೈಕೆಗೆ ತೆರಳಬೇಕು’ ಎಂದು ಎನ್‌ಎಚ್‌ಎಸ್‌ ಇಂಗ್ಲೆಂಡ್‌, ಶುಕ್ರವಾರ ಹೇಳಿದೆ.

‘ಕೊರೊನಾದಿಂದಾಗಿ ಕೌಂಟಿ ಕ್ರಿಕೆಟ್‌ ಟೂರ್ನಿಗಳು ಹಾಗೂ ಕ್ಲಬ್‌ನ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದು ಸಂದಿಗ್ಧ ಸಮಯ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲಾ ಸ್ಥಳೀಯ ಸಮುದಾಯದ ಬೆನ್ನೆಲುಬಾಗಿ ನಿಲ್ಲಬೇಕಿದೆ. ಹೀಗಾಗಿ ಎಜ್‌ಬಾಸ್ಟನ್‌ ಕ್ರೀಡಾಂಗಣವನ್ನು ತಾತ್ಕಾಲಿಕವಾಗಿ ಸರ್ಕಾರದ ಸುಪರ್ದಿಗೆ ಒಪ್ಪಿಸಿದ್ದೇವೆ. ಕ್ಲಬ್‌ನ ಸದಸ್ಯರು ಹಾಗೂ ಹಿರಿಯ ಆಟಗಾರರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ವಾರ್ವಿಕ್‌ಷೈರ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ನ (ಡಬ್ಲ್ಯುಸಿಸಿಸಿ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನೀಲ್‌ ಸ್ನೋಬಲ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.