ADVERTISEMENT

ಶ್ರವಣದೋಷವುಳ್ಳ ಆಟಗಾರರ ಐಪಿಎಲ್‌ 16ರಿಂದ

ಪಿಟಿಐ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಎಂಟು ತಂಡಗಳು, ಇದೇ ತಿಂಗಳ 16 ರಿಂದ 19ರವರೆಗೆ ಜಮ್ಮುವಿನಲ್ಲಿ ಟಿ20 ಶ್ರವಣದೋಷವುಳ್ಳ ಆಟಗಾರರ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಡೆಫ್‌ ಪಂಜಾಬ್‌ ಲಯನ್ಸ್‌, ಡೆಫ್‌ ರಾಜಸ್ತಾನ್ ರಾಯಲ್ಸ್, ಡೆಫ್‌ ಕೊಚ್ಚಿ ಟಸ್ಕರ್ಸ್‌, ಡೆಫ್‌ ಡೆಲ್ಲಿ ಬುಲ್ಸ್‌,  ಡೆಫ್‌ ಕೋಲ್ಕತ್ತ ವಾರಿಯರ್ಸ್‌, ಡೆಫ್‌ ಚೆನ್ನೈ ಬ್ಲಾಸ್ಟರ್ಸ್‌, ಡೆಫ್‌ ಹೈದರಾಬಾದ್ ಈಗಲ್ಸ್‌ ಮತ್ತು ಡೆಫ್‌ ಬೆಂಗಳೂರು ಬಾದಶಾಸ್.

ADVERTISEMENT

ಫೈನಲ್‌ಗಿಂತ ಮೊದಲು 14 ಪಂದ್ಯಗಳು ನಡೆಯಲಿವೆ ಎಂದು ಇಂಡಿಯನ್‌ ಡೆಫ್‌ ಕ್ರಿಕೆಟ್‌ ಅಸೋಸಿಯೇಷನ್‌ ಹೇಳಿಕೆಯಲ್ಲಿ ತಿಳಿಸಿದೆ. ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಚಾಂಪಿಯನ್ ತಂಡ ₹2 ಲಕ್ಷ ಹಾಗೂ ರನ್ನರ್ ಅಪ್ ತಂಡ ₹1 ಲಕ್ಷ ಪಡೆಯಲಿವೆ

ಸೈರಸ್‌ ಪೂನಾವಾಲಾ ಗ್ರೂಫ್ ಆಫ್‌ ಕಂಪನಿಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಹಯೋಗದಲ್ಲಿ ಟೂರ್ನಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.