ಹರಭಜನ್ ಸಿಂಗ್ (ಸಂಗ್ರಹ ಚಿತ್ರ)
ನವದೆಹಲಿ: ‘ಭಾರತ ತಂಡದಲ್ಲಿ ಸೂಪರ್ ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು. ಮುಂದಿನ ಸರಣಿ ಗಳಿಗೆ ಆಟಗಾರರನ್ನು ಆಯ್ಕೆಮಾಡು ವಾಗ ಪ್ರತಿಷ್ಠೆಗಿಂತ ಪ್ರದರ್ಶನವೇ ಮಾನದಂಡವಾಗಿಬೇಕು’ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿದ್ದಾರೆ.
‘ತಂಡದಲ್ಲಿ ಸೂಪರ್‌ಸ್ಟಾರ್ ಸಂಸ್ಖೃತಿ ಬೆಳೆದಿದೆ. ನಮಗೆ ಸೂಪರ್‌ಸ್ಟಾರ್‌ಗಳ ಅಗತ್ಯವಿಲ್ಲ. ಉತ್ತಮ ಪ್ರದರ್ಶನ ನೀಡುವವರ ಅಗತ್ಯವಿದೆ. ಅಂಥ ಆಟಗಾರರಿಂದಷ್ಟೇ ತಂಡ ಮುನ್ನಡೆಯಬಲ್ಲದು. ಸೂಪರ್‌ಸ್ಟಾರ್ ಆಗಲು ಬಯಸುವ ಆಟಗಾರ ತವರಿನಲ್ಲಿದ್ದು ಕ್ರಿಕೆಟ್ ಆಡಬೇಕು’ ಎಂದು ಹರಭಜನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿವಿದಿದ್ದಾರೆ.
‘ಇಂಗ್ಲೆಂಡ್ ಪ್ರವಾಸ ಮುಂದಿದೆ. ಅಲ್ಲೇನಾಗುತ್ತದೆ? ಯಾರು ಆಯ್ಕೆಯಾಗುತ್ತಾರೆ? ಯಾರು ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಉತ್ತಮ ಆಟ ತೋರಿದವರು ಹೋಗಬೇಕು. ಆಟಗಾರರ ಖ್ಯಾತಿಯನ್ನೇ ನೋಡಿ ಆಯ್ಕೆ ಮಾಡುವ ಪರಿಪಾಠ ಸಲ್ಲ’ ಎಂದು ಹರಭಜನ್ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.