ADVERTISEMENT

ಐಪಿಎಲ್‌ನಿಂದ ಇಂಗ್ಲೆಂಡ್‌ ಕ್ರಿಕೆಟ್‌ಗೆ ಲಾಭ: ಬಟ್ಲರ್

ಪಿಟಿಐ
Published 23 ಮೇ 2020, 18:28 IST
Last Updated 23 ಮೇ 2020, 18:28 IST
ಜಾಸ್ ಬಟ್ಲರ್
ಜಾಸ್ ಬಟ್ಲರ್   

ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಾಗಿ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಅನುಕೂಲವಾಗಿದೆ ಎಂದು ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಹೇಳಿದ್ದಾರೆ.

‘ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಿಂದಾಗಿ ಇಂಗ್ಲೆಂಡ್‌ನ ಹೆಚ್ಚು ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಗುತ್ತದೆ. ಅದರಿಂದಾಗಿ ದೇಶದ ಕ್ರಿಕೆಟ್‌ಗೆ ಹೆಚ್ಚು ಆಟಗಾರರು ಲಭಿಸುತ್ತಿದ್ದಾರೆ. ಇದು ಬೆಳವಣಿಗೆಗೆ ಪೂರಕವಾಗಿದೆ’ ಎಂದು ಬಟ್ಲರ್ ಬಿಬಿಸಿ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

2016–17ರಲ್ಲಿ ಬಟ್ಲರ್ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದರು. 2018ರಿಂದ ರಾಜಸ್ಥಾನ್ ರಾಯಲ್ಸ್‌ನಲ್ಲಿ ಆಡುತ್ತಿದ್ದಾರೆ.

ADVERTISEMENT

‘ಈ ಟೂರ್ನಿಯಲ್ಲಿ ಆಡಲು ಬಹಳ ಉತ್ಸುಕನಾಗಿದ್ದೇನೆ. ವಿಶ್ವದಲ್ಲಿ ಉತ್ತಮ ಲೀಗ್ ಟೂರ್ನಿ ಇದಾಗಿದೆ. ವಿಶ್ವಕಪ್ ಟೂರ್ನಿಗಳನ್ನು ಬಿಟ್ಟರೆ ಶ್ರೇಷ್ಠ ಟೂರ್ನಿ ಇದಾಗಿದೆ. ಬೆಂಗಳೂರು ತಂಡದಲ್ಲಿ ವಿಶ್ವದ ಮೂವರು ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳು ಆಡಿದ ಇತಿಹಾಸವಿದೆ. ವಿರಾಟ್, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಂತಹ ಬ್ಯಾಟ್ಸ್‌ಮನ್‌ಗಳು ಶ್ರೇಷ್ಠ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ, ಡೇಲ್ ಸ್ಟೇನ್ ಮತ್ತು ಲಸಿತ್ ಮಾಲಿಂಗ ಅವರನ್ನು ಎದುರಿಸುವುದನ್ನು ನೋಡುವುದೇ ಚೆಂದ’ ಎಂದು ಬಟ್ಲರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.