ADVERTISEMENT

IND vs ENG: ನಿಧಾನಗತಿಯ ಓವರಿಗೆ ದಂಡ ತೆತ್ತ ಇಂಗ್ಲೆಂಡ್‌

ಪಿಟಿಐ
Published 16 ಜುಲೈ 2025, 15:31 IST
Last Updated 16 ಜುಲೈ 2025, 15:31 IST
<div class="paragraphs"><p>ಇಂಗ್ಲೆಂಡ್ ತಂಡ</p></div>

ಇಂಗ್ಲೆಂಡ್ ತಂಡ

   

(ಚಿತ್ರ ಕೃಪೆ: X/@englandcricket)

ಲಂಡನ್‌: ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ನಿಧಾನಗತಿಯಲ್ಲಿ ಓವರುಗಳನ್ನು ಮಾಡಿದ್ದಕ್ಕೆ ಇಂಗ್ಲೆಂಡ್ ತಂಡಕ್ಕೆ ದಂಡವಾಗಿ ಎರಡು ಪಾಯಿಂಟ್‌ಗಳನ್ನು ಕಳೆದುಹಾಕಿದ ಪರಿಣಾಮ ಆ ತಂಡ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನಕ್ಕಿಳಿಯಿತು.

ADVERTISEMENT

ಬೆನ್‌ ಸ್ಟೋಕ್ಸ್ ಮತ್ತು ತಂಡದ ಇತರ ಆಟಗಾರರಿಗೆ ಪಂದ್ಯ ಸಂಭಾವನೆಯ ಶೇ 10ರಷ್ಟು ದಂಡ ವಿಧಿಸಲಾಗಿದೆ. ಹೋರಾಟದಿಂದ ಕೂಡಿದ ಆ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್‌ ಅಂತಿಮ ದಿನವಾದ ಸೋಮವಾರ 22 ರನ್‌ಗಳಿಂದ ಗೆದ್ದುಕೊಂಡಿತ್ತು.

ಪಂದ್ಯದ ಸಮಯವನ್ನು ಪರಿಗಣಿಸಿದ ನಂತರ ಇಂಗ್ಲೆಂಡ್ ತಂಡ ಎರಡು ಓವರುಗಳನ್ನು ಕಡಿಮೆ ಮಾಡಿರುವುದು ಖಚಿತಪಟ್ಟಿದ್ದು, ಪಂದ್ಯದ ರೆಫ್ರಿ ರಿಚಿ ರಿಚರ್ಡ್‌ಸನ್‌ ದಂಡ ವಿಧಿಸಿದರು. ‌ಭಾರತ ಈ ಡಬ್ಲ್ಯುಟಿಸಿ ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಇಂಗ್ಲೆಂಡ್ ಅಂಕ ಗಳಿಕೆ 24 ರಿಂದ 22ಕ್ಕೆ ಕಡಿತವಾಗಿದೆ. ಪರಿಣಾಮ ಅವರ ಶೇಕಡವಾರು ಪಾಯಿಂಟ್ಸ್‌ 66.67 ರಿಂದ 61.11ಕ್ಕೆ ಇಳಿದಿದೆ. ಹೀಗಾಗಿ ಮೂರನೇ ಸ್ಥಾನದಲ್ಲಿದ್ದ ಶ್ರೀಲಂಕಾ ಈಗ (66.67 ಶೇ. ಪಾಯಿಂಟ್ಸ್‌) ಎರಡನೇ ಸ್ಥಾನಕ್ಕೇರಿತು.

ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್ ತಪ್ಪೊಪ್ಪಿಕೊಂಡ ಪರಿಣಾಮ, ಅವರನ್ನು ಕರೆಸಿ ಔಪಚಾರಿಕ ವಿಚಾರಣೆ ನಡೆಸಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.