ADVERTISEMENT

ಶ್ರೀಲಂಕಾ ತಂಡಕ್ಕೆ ಭಾರತದ ಮಾಜಿ ಕೋಚ್‌ ಶ್ರೀಧರ್‌ ತರಬೇತಿ

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಹೇಳಿಕೆ

ಪಿಟಿಐ
Published 6 ಮೇ 2025, 14:00 IST
Last Updated 6 ಮೇ 2025, 14:00 IST
<div class="paragraphs"><p>ಆರ್‌.ಶ್ರೀಧರ್‌</p></div>

ಆರ್‌.ಶ್ರೀಧರ್‌

   

ನವದೆಹಲಿ: ಶ್ರೀಲಂಕಾ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳಿಗೆ ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ಆರ್‌.ಶ್ರೀಧರ್‌ 10 ದಿನಗಳ ಕಾಲ ವಿವಿಧ ಹಂತಗಳಲ್ಲಿ ಬುಧವಾರದಿಂದ ತರಬೇತಿ ನೀಡಲಿದ್ದಾರೆ.  

ಬಿಸಿಸಿಐನ ಮೂರನೇ ದರ್ಜೆಯ ಕೋಚ್‌ ಆಗಿರುವ ಶ್ರೀಧರ್‌ ಲಂಕಾದ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳು, ಉದಯೋನ್ಮುಖ ತಂಡಗಳು, ಪ್ರೀಮಿಯರ್‌ ಕ್ಲಬ್‌ ಆಟಗಾರರು, 19 ವರ್ಷದೊಳಗಿನವರ ತಂಡ ಮತ್ತು ಮಹಿಳಾ ಎ ತಂಡಗಳಿಗೆ ಕ್ರಿಕೆಟ್‌ ಪಾಠ ಹೇಳಿಕೊಡಲಿದ್ದಾರೆ.  

ADVERTISEMENT

ವಿಶೇಷ ತರಬೇತಿ ಅಡಿಯಲ್ಲಿ ಲಂಕಾ ಕ್ರಿಕೆಟಿಗರಿಗೆ ಫೀಲ್ಡಿಂಗ್‌ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಸಹಾಯಮಾಡಲಿದ್ದಾರೆ. 2014ರಿಂದ 2021ರವರೆಗೆ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ 300 ಅಂತರರಾಷ್ಟ್ರೀಯ ಪಂದ್ಯಗಳನ್ನು ಪ್ರತಿನಿಧಿಸಿರುವ ಶ್ರೀಧರ್‌ ತಮ್ಮ ಅನುಭವಗಳನ್ನ ಧಾರೆಯೆರೆಯಲಿದ್ದಾರೆ.

ಲಂಕಾ ಕ್ರಿಕೆಟಿಗರಿಗೆ ಫೀಲ್ಡಿಂಗ್‌ ಡ್ರಿಲ್ಸ್‌, ಕೌಶಲ್ಯ ಆಧಾರಿತ ತರಬೇತಿ ಮತ್ತು ನೈಜ ಆಟದ ಸವಾಲನ್ನು ಹೇಳಿಕೊಡಲಿದ್ದಾರೆ  ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.