ADVERTISEMENT

14 ವರ್ಷದೊಳಗಿನವರ ಕ್ರಿಕೆಟ್: ಒಂದೇ ಪಂದ್ಯದಲ್ಲಿ ಶತಕ, 10 ವಿಕೆಟ್ ಪಡೆದ ಶಾದಾಬ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 1:41 IST
Last Updated 16 ಮಾರ್ಚ್ 2023, 1:41 IST
ಶಹಾನ್ ಶಾದಾಬ್
ಶಹಾನ್ ಶಾದಾಬ್   

ಬೆಂಗಳೂರು: ಶ್ರೀರಾಮ್ ಗ್ಲೋಬಲ್ ಶಾಲೆಯ ಶಹಾನ್ ಶಾದಾಬ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಮತ್ತು 10 ವಿಕೆಟ್ ಗಳಿಸಿ ವಿನೂತನ ಸಾಧನೆ ಮಾಡಿದ್ದಾರೆ.

ಬಿ.ಟಿ. ರಾಮಯ್ಯ ಶೀಲ್ಡ್ (ಮೂರನೇ ಡಿವಿಷನ್, ಗುಂಪು ಒಂದು) 14 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಫ್ರೀಡಂ ಇಂಟರ್‌ನ್ಯಾಷನಲ್ ಶಾಲೆ ವಿರುದ್ಧದ ಪಂದ್ಯದಲ್ಲಿ ಶಾದಾಬ್ 88 ಎಸೆತಗಳಲ್ಲಿ 115 ರನ್ ಗಳಿಸಿದರು. ನಾಲ್ಕು ಓವರ್ ಬೌಲಿಂಗ್ ಮಾಡಿ 10 ವಿಕೆಟ್‌ಗಳನ್ನು ಗಳಿಸಿದರು. ಕೇವಲ ಎಂಟು ರನ್‌ಗಳನ್ನು ಮಾತ್ರ ಕೊಟ್ಟರು. ಇದರಿಂದಾಗಿ ಶ್ರೀರಾಮ್ ಗ್ಲೋಬಲ್ ಶಾಲೆಯು 385 ರನ್‌ಗಳ ಅಂತರದಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು
ಶ್ರೀರಾಮ್ ಗ್ಲೋಬಲ್ ಶಾಲೆ:
50 ಓವರ್‌ಗಳಲ್ಲಿ 3ಕ್ಕೆ399 (ಶಹಾನ್ ಶಾದಾಬ್ 115, ಮೊನಿಷ್ ಗೌಡ 87, ಆದಿಲ್ ರಂಜೀತ್ ಔಟಾಗದೆ 78)
ಫ್ರೀಡಂ ಇಂಟರ್‌ನ್ಯಾಷನಲ್ ಶಾಲೆ: 7 ಓವರ್‌ಗಳಲ್ಲಿ 14 (ಶಹಾನ್ ಶಾದಾಬ್ 8ಕ್ಕೆ10)
ಫಲಿತಾಂಶ: ಶ್ರೀರಾಮ್ ಗ್ಲೋಬಲ್ ಶಾಲೆಗೆ 385 ರನ್‌ಗಳ ಜಯ.

ADVERTISEMENT

ಯುರೊ ಸ್ಕೂಲ್, ವೈಟ್‌ಫೀಲ್ಡ್: 33.1 ಓವರ್‌ಗಳಲ್ಲಿ 146 (ಡಿ. ವಿಹಾನ್ 56, ಆರ್ಯಮನ್ 35ಕ್ಕೆ2, ಅಂಕಿತ್ ಭಟ್ 32ಕ್ಕೆ4)
ವೈಟ್‌ಫೀಲ್ಡ್ ಗ್ಲೋಬಲ್ ಸ್ಕೂಲ್: 21.1 ಓವರ್‌ಗಳಲ್ಲಿ 102 (ಲಕ್ಷ್ಯ 26, ಆರ್ಯಮನ್ 28, ಯಶೋವರ್ಧನ್ 24ಕ್ಕೆ4, ಎಂ. ಶ್ರೇಯಸ್ 6ಕ್ಕೆ4)
ಯೂರೊ ಸ್ಕೂಲ್‌ಗೆ 44 ರನ್‌ಗಳ ಜಯ.

ವಿಎಸ್‌ಎಸ್‌ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ: 50 ಓವರ್‌ಗಳಲ್ಲಿ 9ಕ್ಕೆ237 (ಎಂ.ಆಕಾಶ್ 70, ಚಿರಾಗ್ 32, ರೋಹನ್ 23ಕ್ಕೆ2, ಶ್ರೀ ಆದಿತ್ಯ 40ಕ್ಕೆ2, ರಿಷಿಕ್ 41ಕ್ಕೆ2)
ವ್ಯಾಸ ಇಂಟರ್‌ನ್ಯಾಷನಲ್ ಸ್ಕೂಲ್: 15 ಓವರ್‌ಗಳಲ್ಲಿ 79 (ಪ್ರಕಲ್ಪ 41, ಚಿರಾಗ್ 33ಕ್ಕೆ5, ಕೆ.ಯು. ಶ್ರೇಯಸ್ 10ಕ್ಕೆ4)
ವಿಎಸ್‌ಎಸ್‌ಗೆ 158 ರನ್‌ ಜಯ.

ಸಿದ್ಧಗಂಗಾ ಶಾಲೆ: 27.4 ಓವರ್‌ಗಳಲ್ಲಿ 175 (ಎಂ. ದಕ್ಷಿತ್ 59, ಶ್ರೀಕಾಂತ್ 24, ಹರ್ಷಲ್ 17ಕ್ಕೆ2, ಧರ್ಷ್ 45ಕ್ಕೆ3)
ಸುದರ್ಶನ್ ವಿದ್ಯಾಮಂದಿರ: 31.3 ಓವರ್‌ಗಳಲ್ಲಿ 7ಕ್ಕೆ 178 (ಧರ್ಷ 49, ಧನುಷ್ ಔಟಾಗದೆ 27, ಹರ್ಷಲ್ 29)
ಸುದರ್ಶನ್ ವಿದ್ಯಾಮಂದಿರಕ್ಕೆ 3 ವಿಕೆಟ್‌ಗಳ ಜಯ.

ಕ್ರೈಸಲಿಸ್ ಹೈ: 24 ಓವರ್‌ಗಳಲ್ಲಿ 79 (ಭಾವೇಶ್ 27, ಆರ್. ಎರ್ವಿನ್ 26ಕ್ಕೆ3, ಧ್ರುವ ಆನಂದ 14ಕ್ಕೆ3, ಜೈರಾಜ್ ಕೌಶಿಕ್ 18ಕ್ಕೆ2)
ಡೆಲ್ಲಿ ಪಬ್ಲಿಕ್ ಸ್ಕೂಲ್, ವೈಟ್‌ಫೀಲ್ಡ್: 10.4 ಓವರ್‌ಗಳಲ್ಲಿ 1 ವಿಕೆಟ್‌ಗೆ 81 (ಅಯಾನ್ ಮುಖರ್ಜಿ 20, ಅಂಜನಿ ಕುಮಾರ್ 30)
ಡೆಲ್ಲಿ ಪಬ್ಲಿಕ್ ಶಾಲೆಗೆ 9 ವಿಕೆಟ್‌ಗಳ ಜಯ.

ದ ಸ್ಪೋರ್ಟ್ಸ್ ಸ್ಕೂಲ್: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 301 (ಆತ್ರೇಯ ಭಟ್ 43, ರುದ್ರಾಂಶ್ 24, ತಂಶ್ ಕೃಷ್ಣ 64, ಜಾಮಿ ತನಯ್ 38, ಮಹಿಲ್ ಮೆಹ್ತಾ ಔಟಾಗದೆ 62, ಡಿ.ಆರ್. ಪ್ರಣವ್ 22, ಭಾಸವನ್ 56ಕ್ಕೆ2, ದಿನೇಶ್ ರವಿಶಂಕರ್ 36ಕ್ಕೆ3)
ಗೋಪಾಲನ್ ಇಂಟರ್‌ನ್ಯಾಷನಲ್ ಶಾಲೆ: 50 ಓವರ್‌ಗಳಲ್ಲಿ 8ಕ್ಕೆ 292 (ಆವಾನ್ 23, ಭಾಸವನ್ 115, ಡಿ.ಆರ್. ದಿನೇಶ್ 36, ಇದಾಂತ್ 27, ಜತಿನ್ ಸಾಯಿ 33, ಕಾಕನ್ ಹಳನಿ 22, ವಿಶಾಲ್ ಸಂಜಯ್ 41ಕ್ಕೆ2, ಕಾರ್ತಿಕ್ ರಾಜ್ 50ಕ್ಕೆ2)
ದ ಸ್ಪೋರ್ಟ್ಸ್ ಸ್ಕೂಲ್‌ಗೆ 9 ರನ್ ಜಯ.

ದೇವಮಾತಾ ಸೆಂಟ್ರಲ್ ಸ್ಕೂಲ್: 50 ಓವರ್‌ಗಳಲ್ಲಿ 7ಕ್ಕೆ270 (ಎಸ್. ರತಿನ್ 22, ಜೈ ಆದಿತ್ಯ ಔಟಾಗದೆ 137, ಸಮನ್ಯು 20, ಅಗರ್ಷ್ ಔಟಾಗದೆ 25, ಎಸ್. ಸಮರ್ಥ್ 31ಕ್ಕೆ3, ಪುರುಷೋತ್ತಮ 56ಕ್ಕೆ2, ಧವನ್ 43ಕ್ಕೆ2)
ಕೆಎಲ್‌ಇ ಸೊಸೈಟಿ ಶಾಲೆ (ಬಿ): 17.1 ಓವರ್‌ಗಳಲ್ಲಿ 42 (ಮಣಿ 11ಕ್ಕೆ2, ಆದರ್ಶ್ 8ಕ್ಕೆ3, ಹರ್ಷ 7ಕ್ಕೆ2, ಸಿದ್ಧಾರ್ಥ್ 5ಕ್ಕೆ2)
ದೇವಮಾತಾ ಶಾಲೆಗೆ 228 ರನ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.