ಲಂಡನ್: ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಋತುರಾಜ್ ಗಾಯಕವಾಡ ಅವರು ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
‘ಋತುರಾಜ್ ಅವರು ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ನಮ್ಮ ತಂಡದ ಪರ ಆಡುತ್ತಿಲ್ಲ’ ಎಂದು ಯಾರ್ಕ್‌ಶೈರ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
ಋತುರಾಜ್ ಅವರು ಯಾರ್ಕ್‌ಶೈರ್ ಕ್ಲಬ್ ತಂಡದ ಪರ ಐದು ಪಂದ್ಯಗಳನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದರು. ಹಾಲಿ ಚಾಂಪಿಯನ್ ಸರ್‍ರೆ ಎದುರು ಸ್ಕಾರ್‌ಬರೊದಲ್ಲಿ ಮಂಗಳವಾರ (ಜುಲೈ 22) ನಡೆಯಲಿರುವ ಪಂದ್ಯದಲ್ಲಿ ಅವರು ಕಣಕ್ಕಿಳಿಯಬೇಕಿತ್ತು.
10 ತಂಡಗಳ ಕೌಂಟಿ ಮೊದಲ ಡಿವಿಷನ್ ಲೀಗ್‌ನಲ್ಲಿ ಯಾರ್ಕ್‌ಶೈರ್ ಪ್ರಸ್ತುತ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.