ADVERTISEMENT

ದಾದಾ ಮತ್ತು ಗೋಡೆ: ದೀರ್ಘಕಾಲೀನ ಗೆಳೆಯ ದ್ರಾವಿಡ್‌ರನ್ನು ಭೇಟಿ ಮಾಡಿದ ಗಂಗೂಲಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 8:43 IST
Last Updated 30 ಅಕ್ಟೋಬರ್ 2019, 8:43 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ಬೆಂಗಳೂರು:ಕ್ರಿಕೆಟ್‌ ಅಭಿಮಾನಿಗಳಲ್ಲಿ ‘ದಾದಾ’ ಮತ್ತು ‘ಗೋಡೆ’ ಎಂದೇ ಖ್ಯಾತರಾಗಿರುವ ಹಾಗೂ ಭಾರತೀಯ ಕ್ರಿಕೆಟ್‌ ತಂಡದಲ್ಲಿನ ದೀರ್ಘಕಾಲೀನ ಗೆಳೆಯರಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಬುಧವಾರ ಭೇಟಿಯಾದರು.

ಭಾರತೀಯ ಕ್ರಿಕೆಟ್‌ ತಂಡದಲ್ಲಿ ದೀರ್ಘ ಕಾಲ ಕ್ರಿಕೆಟ್‌ ಆಡಿದ್ದ ಈ ಗೆಳೆಯರು ಪರಸ್ಪರ ಭೇಟಿಯ ಸಂದರ್ಭದಲ್ಲಿಕೆಲವೊತ್ತು ಸುಮಧುರ ನೆನಪುಗಳನ್ನು ಮೆಲುಕು ಹಾಕಿದರು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಕಚೇರಿಯಲ್ಲಿಸೌರವ್ ಗಂಗೂಲಿ ಅವರುರಾಹುಲ್ ದ್ರಾವಿಡ್ ಅವರನ್ನು ಭೇಟಿಯಾದರು.

ADVERTISEMENT

ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಎನ್‌ಸಿಎ ಅಧ್ಯಕ್ಷರಾದ ರಾಹುಲ್‌ ದ್ರಾವಿಡ್‌ ಅವರನ್ನು ಭೇಟಿ ಮಾಡಿದ್ದಾರೆ.

2000ನೇ ಇಸವಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎನ್‌ಸಿಎ ಆರಂಭವಾಯಿತು. ಗಾಯಗೊಂಡ ಕ್ರಿಕೆಟ್ ಆಟಗಾರರಿಗೆ ಪುನಶ್ಚೇತನ, ತಂಡಗಳಿಗೆ ವಿಶೇಷ ಶಿಬಿರಗಳನ್ನು ಆಯೋಜಿಸುವ ಕಾರ್ಯವನ್ನು ಎನ್‌ಸಿಎ ಮಾಡುತ್ತಿದೆ.ಇದೀಗ ರಾಹುಲ್‌ ಎನ್‌ಸಿಎ ಅಧ್ಯಕ್ಷರಾಗಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರುವ ಕೆಎಸ್‌ಸಿಎ ಜಮೀನಿನಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮತ್ತು ಬಿಸಿಸಿಐ ಮುಖ್ಯ ಕಚೇರಿ ಕಟ್ಟಡ ಕಾಮಗಾರಿಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಕಳೆದ ಎರಡು ದಶಕಗಳಲ್ಲಿ ಕ್ರಿಕೆಟ್‌ ಬೆಳೆದಿದ್ದು ಆಟಗಾರರು ಮತ್ತು ಸಿಬ್ಬಂದಿಯ ತರಬೇತಿ, ಪುನಶ್ಚೇತನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು ಈ ಬಗ್ಗೆ ನೆರವು ನೀಡುವಂತೆ ಎನ್‌ಸಿಎ ಗಂಗೂಲಿ ಅವರಲ್ಲಿ ಮನವಿ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.