ADVERTISEMENT

ಕ್ರಿಸ್‌ ಗೇಲ್‌ ಉಪನಾಯಕ

ಅನುಭವಿ ಆಟಗಾರನ ಹೆಗಲಿಗೆ ಹೊಸ ಜವಾಬ್ದಾರಿ

ರಾಯಿಟರ್ಸ್
Published 7 ಮೇ 2019, 19:37 IST
Last Updated 7 ಮೇ 2019, 19:37 IST
ಕ್ರಿಸ್‌ ಗೇಲ್‌
ಕ್ರಿಸ್‌ ಗೇಲ್‌   

ಆಂಟಿಗಾ: ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾದ ವೆಸ್ಟ್‌ ಇಂಡೀಸ್‌ ತಂಡದ ಉಪನಾಯಕ ಸ್ಥಾನವನ್ನು ಕ್ರಿಸ್‌ ಗೇಲ್‌ ಅವರಿಗೆ ವಹಿಸಲಾಗಿದೆ. ಜೇಸನ್‌ ಹೋಲ್ಡರ್‌ ನಾಯಕನಾಗಿದ್ದಾರೆ.

39 ವರ್ಷದ ಗೇಲ್‌ಗೆ ಇದು ಐದನೇ ವಿಶ್ವಕಪ್‌ ಟೂರ್ನಿ. ವಿಂಡೀಸ್‌ ಪರ 289 ಏಕದಿನ ಪಂದ್ಯಗಳನ್ನು ಆಡಿರುವ ಈ ಸ್ಫೋಟಕ ಆಟಗಾರ 10151 ರನ್‌ ಗಳಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದಲ್ಲಿ ಆಡಿದ್ದ ಗೇಲ್‌ 13 ಪಂದ್ಯಗಳಿಂದ 490ರನ್‌ ಗಳಿಸಿ ಗಮನ ಸೆಳೆದಿದ್ದರು. ಅಜೇಯ 99ರನ್‌ ಬಾರಿಸಿದ್ದರು.

ADVERTISEMENT

ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ಶಾಯಿ ಹೋಪ್‌ ಐರ್ಲೆಂಡ್‌ನಲ್ಲಿ ನಡೆಯು ತ್ತಿರುವ ತ್ರಿಕೋನ ಸರಣಿಯಲ್ಲಿ ತಂಡದ ಉಪನಾಯಕನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಬಾಂಗ್ಲಾ ಕೂಡ ಈ ಸರಣಿಯಲ್ಲಿ ಆಡುತ್ತಿದೆ.

ನೊರ್ಜೆ ಸ್ಥಾನಕ್ಕೆ ಕ್ರಿಸ್‌ ಮಾರಿಸ್: ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಅವರು ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡಕ್ಕೆ ಸೇ‍ರ್ಡೆಯಾಗಿದ್ದಾರೆ. ಗಾಯಗೊಂಡ ವೇಗಿ ಆನ್ರಿಚ್‌ ನೊರ್ಜೆ ಬದಲಿಗೆ ಅವರಿಗೆ ಸ್ಥಾನ ನೀಡಲಾಗಿದೆ.

ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ನೊರ್ಜೆ ಬಲಗೈ ಬೆರಳಿಗೆ ಗಾಯವಾಗಿತ್ತು. ಸಂಪೂರ್ಣ ಗುಣಮುಖವಾಗಲು ಅವರಿಗೆ ಕೆಲವು ವಾರ ಬೇಕಾಗುತ್ತವೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಮಂಗಳವಾರ ತಿಳಿಸಿದೆ.

ಮಾರಿಸ್ 2018ರ ಫೆಬ್ರುವರಿ ಯಿಂದ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಟ್ವೆಂಟಿ–20 ಟೂರ್ನಿಗಳಲ್ಲಿ ಆಡಿದ್ದಾರೆ. ವಿಶ್ವಕಪ್ ಮುಂದಿರುವಂತೆ ಆಟಗಾರರ ಅದ ರಲ್ಲೂ ವಿಶೇಷವಾಗಿ ಬೌಲರ್‌ಗಳ ಗಾಯದ ಸಮಸ್ಯೆ ಆಫ್ರಿಕಾ ತಂಡಕ್ಕೆ ತಲೆನೋವಾಗಿದೆ.

ಲುಂಗಿ ಗಿಡಿ, ಕಗಿಸೊ ರಬಾಡ ಹಾಗೂ ಡೇಲ್‌ ಸ್ಟೇನ್‌ ಗಾಯಕ್ಕೆ ಒಳಗಾಗಿದ್ದಾರೆ. ಈ ಮೂವರು ಶೀಘ್ರ ಫಿಟ್ನೆಸ್ ಸಾಬೀತುಪಡಿಸದಿದ್ದಲ್ಲಿ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.