ADVERTISEMENT

ಕೋವಿಡ್‌ ವಿರುದ್ಧ ಹೋರಾಟ | ಬ್ಯಾಟ್‌ ಹರಾಜಿಗಿಟ್ಟ ಹರ್ಷೆಲ್‌ ಗಿಬ್ಸ್‌

ಪಿಟಿಐ
Published 1 ಮೇ 2020, 20:00 IST
Last Updated 1 ಮೇ 2020, 20:00 IST
ಹರ್ಷೆಲ್‌ ಗಿಬ್ಸ್
ಹರ್ಷೆಲ್‌ ಗಿಬ್ಸ್   

ಜೋಹಾನ್ಸ್‌ಬರ್ಗ್‌: ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವವರ ಸಾಲಿಗೆ ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಹರ್ಷೆಲ್‌ ಗಿಬ್ಸ್‌ ಈಗ ಹೊಸ ಸೇರ್ಪಡೆ. 2006ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ (175 ರನ್‌) ದಾಖಲಿಸಲು ಬಳಸಿದ್ದ ಬ್ಯಾಟ್‌ ಅನ್ನು ಅವರು ಹರಾಜಿಗಿಟ್ಟಿದ್ದಾರೆ. ಆ ಮೂಲಕ ಬಂದ ಹಣವನ್ನು ಸಂತ್ರಸ್ತರಿಗೆ ನೀಡಲಿದ್ದಾರೆ. ಈ ಕುರಿತು ಗಿಬ್ಸ್‌ ಟ್ವೀಟ್‌ ಮಾಡಿದ್ದಾರೆ.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಆ ಏಕದಿನ ಸರಣಿಯ ಐದನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 4 ವಿಕೆಟ್‌ಗೆ 434 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಹರಿಣ ಪಡೆ ಒಂಬತ್ತು ವಿಕೆಟ್‌ ಕಳೆದುಕೊಂಡು 438 ರನ್‌ ಗಳಿಸಿ ಗೆದ್ದಿತ್ತು. ಇದು ಏಕದಿನ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ದಾಖಲಾದ ಗರಿಷ್ಠ ಸ್ಕೋರ್‌ (ವಿಶ್ವದಾಖಲೆ) ಆಗಿದೆ.

ಪಂದ್ಯದಲ್ಲಿ 111 ಎಸೆತಗಳನ್ನು ಎದುರಿಸಿದ್ದ ಗಿಬ್ಸ್‌, 21 ಬೌಂಡರಿ ಹಾಗೂ ಏಳು ಸಿಕ್ಸರ್‌ ಚಚ್ಚಿದ್ದರು. ಆಸ್ಟ್ರೇಲಿಯಾ ಪರ ನಾಯಕ ರಿಕಿ ಪಾಂಟಿಂಗ್ ಕೂಡ ಶತಕದ‌ (164) ಆಟವಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.