ADVERTISEMENT

ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್: ಹರಭಜನ್ ಸಹಮತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 19:45 IST
Last Updated 7 ಏಪ್ರಿಲ್ 2020, 19:45 IST
ಹರಭಜನ್ ಸಿಂಗ್
ಹರಭಜನ್ ಸಿಂಗ್   

ಮುಂಬೈ: ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆದರೂ ತಾವು ಆಡಲು ಸಿದ್ಧ ಎಂದು ಹಿರಿಯ ಕ್ರಿಕೆಟಿಗ ಹರಭಜನ್ ಸಿಂಗ್ ಹೇಳಿದ್ದಾರೆ.

‘ಒಬ್ಬ ಆಟಗಾರನಾಗ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಆಡುವುದು ಕಷ್ಟ. ಅಂಗಳದಲ್ಲಿ ಪ್ರೇಕ್ಷಕರ ಪ್ರೋತ್ಸಾಹದ ಅಲೆಗಳಿಲ್ಲದಿದ್ದರೆ ಹೆಚ್ಚುವರಿ ಶಕ್ತಿ ಬರುವುದಿಲ್ಲವೆಂಬುದು ಗೊತ್ತು. ಆದರೆ ಪರಿಸ್ಥಿತಿ ಎದುರಾದರೆ ಅಂತಹ ಸಂದರ್ಭಕ್ಕೂ ನಾವು ಸಿದ್ಧರಾಗಬೇಕು’ ಎಂದು ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡುವ ಹರಭಜನ್ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಗೆ ತಿಳಿಸಿದ್ದಾರೆ.

‘ಹಾಗೊಮ್ಮೆ ಪಂದ್ಯಗಳನ್ನು ನಡೆಸಬೇಕಾದರೆ ಬಹಳಷ್ಟು ಎಚ್ಚರಿಕೆಗಳನ್ನು ಕೈಗೊಳ್ಳುವುದು ಅವಶ್ಯಕ. ಹೋಟೆಲ್, ವಿಮಾನಯಾನ, ಸ್ಥಳೀಯ ಸಾರಿಗೆ, ಸುರಕ್ಷತೆ, ಚಿಕಿತ್ಸೆ ಮತ್ತು ನೈರ್ಮಲ್ಯಗಳ ನಿರ್ವಹಣೆ ಮಾಡಬೇಕು’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.