ನವದೆಹಲಿ: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪ ನಾಯಕಿ ಸ್ಮೃತಿ ಮಂದಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಸೋಮವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕೇಂದ್ರಿಯ ಗುತ್ತಿಗೆಯ ಅತ್ಯುನ್ನತ ‘ಎ’ ದರ್ಜೆಯಲ್ಲಿ ಉಳಿಸಿಕೊಳ್ಳಲಾಗಿದೆ.
ವೇಗದ ಬೌಲರ್ ರೇಣುಕಾ ಠಾಕೂರ್, ಆಲ್‌ರೌಂಡರ್ ಜೆಮಿಮಾ ರಾಡ್ರಿಗಸ್, ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಆರಂಭ ಆಟಗಾರ್ತಿ ಶಫಾಲಿ ವರ್ಮಾ ಅವರು ‘ಬಿ’ ಗ್ರೇಡ್ ಪಟ್ಟಿಯಲ್ಲಿ ಮುಂದುವರಿಯಲಿದ್ದಾರೆ.
ಕಳೆದ ವರ್ಷ ‘ಬಿ’ ಗ್ರೇಡ್‌ನಲ್ಲಿದ್ದ ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ ಈ ಋತುವಿನಲ್ಲಿ ಗುತ್ತಿಗೆ ವ್ಯಾಪ್ತಿಯಡಿ ಸ್ಥಾನ ಪಡೆದಿಲ್ಲ.
ಯುವ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ, ವೇಗದ ಬೌಲರ್‌ಗಳಾದ ತಿತಾಸ್ ಸಾಧು, ಆರುಂಧತಿ ರೆಡ್ಡಿ, ಆಲ್‌ರೌಂಡರ್ ಅಮನ್ಜೋತ್ ಕೌರ್, ವಿಕೆಟ್ ಕೀಪರ್ ಉಮಾ ಚೆಟ್ರಿ ಮೊದಲ ಬಾರಿ ಗುತ್ತಿಗೆ ವ್ಯಾಪ್ತಿಯಡಿ ಬಂದಿದ್ದು ‘ಸಿ’ ದರ್ಜೆಯಲ್ಲಿದ್ದಾರೆ. ಯಷ್ಟಿಕಾ ಭಾಟಿಯಾ, ರಾಧಾ ಯಾದವ್, ಸ್ನೇಹ ರಾಣಾ ಮತ್ತು ಪೂಜಾ ವಸ್ತ್ರಾಕರ್ ಅವರೂ ಇದೇ ದರ್ಜೆಯಲ್ಲಿ ಮುಂದುವರಿದಿದ್ದಾರೆ.
ಮೇಘನಾ ಸಿಂಗ್, ದೇವಿಕಾ ವೈದ್ಯ, ಸಬ್ಬಿನೇನಿ ಮೇಘನಾ, ಅಂಜುಲಿ ಸರ್ವಾಣಿ ಮತ್ತು ಹರ್ಲೀನ್ ಡಿಯೋಲ್ ಅವರು ಗುತ್ತಿಗೆ ಅವಕಾಶ ತಪ್ಪಿಸಿಕೊಂಡಿದ್ದಾರೆ.
‘ಎ’ ದರ್ಜೆಯಡಿ ಬರುವ ಆಟಗಾರ್ತಿ ಪಂದ್ಯ ಶುಲ್ಕದ ಜೊತೆ ₹50 ಲಕ್ಷ, ‘ಬಿ’ ದರ್ಜೆಯಡಿ ಗುತ್ತಿಗೆ ಹೊಂದಿರುವ ಆಟಗಾರ್ತಿ ₹30 ಲಕ್ಷ ಮತ್ತು ‘ಸಿ’ ದರ್ಜೆ ಪಟ್ಟಿಯಲ್ಲಿರುವ ಆಟಗಾರ್ತಿ ₹10 ಲಕ್ಷ ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.