ADVERTISEMENT

ಟ್ರಾವಿಸ್ ಹೆಡ್‌ ‘ಡಬಲ್’ ದ್ವಿಶತಕ

ರಾಯಿಟರ್ಸ್
Published 14 ಅಕ್ಟೋಬರ್ 2021, 4:40 IST
Last Updated 14 ಅಕ್ಟೋಬರ್ 2021, 4:40 IST
ಟ್ರಾವಿಸ್ ಹೆಡ್ –ಪಿಟಿಐ ಚಿತ್ರ
ಟ್ರಾವಿಸ್ ಹೆಡ್ –ಪಿಟಿಐ ಚಿತ್ರ   

ಸಿಡ್ನಿ: ಮಧ್ಯಮ ಕ್ರಮಾಂಕದ ಬ್ಯಾಟರ್ ಟ್ರಾವಿಸ್ ಹೆಡ್, ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ದ್ವಿಶತಕ ಗಳಿಸಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎನಿಸಿಕೊಂಡರು. ಮಾರ್ಷ್‌ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಸ್ಟ್ರೇಲಿಯಾ ಪರ ಆಡುತ್ತಿರುವ ಅವರು ಕ್ವೀನ್ಸ್‌ಲ್ಯಾಂಡ್ ಎದುರು ಬುಧವಾರ ನಡೆದ ಪಂದ್ಯದಲ್ಲಿ 230 ರನ್ ಗಳಿಸಿದರು.

127 ಎಸೆತಗಳಲ್ಲಿ ಈ ಸಾಧನೆ ಮಾಡಿದ ಅವರು ಎಂಟು ಸಿಕ್ಸರ್ ಮತ್ತು 28 ಬೌಂಡರಿಗಳನ್ನು ಸಿಡಿಸಿದ್ದರು. ಇದು ಆಸ್ಟ್ರೇಲಿಯಾದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 2018ರಲ್ಲಿ ಕ್ವೀನ್ಸ್‌ಲ್ಯಾಂಡ್ ಎದುರಿನ ಪಂದ್ಯದಲ್ಲಿ ಡಿ‘ಆರ್ಸಿ ಶಾರ್ಟ್ 257 ರನ್ ಗಳಿಸಿದ್ದರು.

ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಆರು ವರ್ಷಗಳ ಹಿಂದೆ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 202 ರನ್ ಗಳಿಸಿದ್ದರು. ಅವರನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡದಿಂದ ಕಳೆದ ವರ್ಷ ಕೈಬಿಡಲಾಗಿತ್ತು. ಈ ಬಾರಿ ಆ್ಯಷಸ್ ಸರಣಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಸರಣಿಯ ಮೊದಲ ಪಂದ್ಯ ಬ್ರಿಸ್ಬೇನ್‌ನಲ್ಲಿ ಡಿಸೆಂಬರ್ ಎಂಟರಿಂದ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.