ADVERTISEMENT

ಹುಬ್ಬಳ್ಳಿ: ನೂತನ ಕ್ರಿಕೆಟ್‌ ಮೈದಾನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 18:31 IST
Last Updated 20 ಜನವರಿ 2019, 18:31 IST
ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಹೊಸ ಕ್ರಿಕೆಟ್‌ ಮೈದಾನವನ್ನು ಭಾನುವಾರ ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಾಟೀಲ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಹೊಸ ಕ್ರಿಕೆಟ್‌ ಮೈದಾನವನ್ನು ಭಾನುವಾರ ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಾಟೀಲ ಉದ್ಘಾಟಿಸಿದರು   

ಹುಬ್ಬಳ್ಳಿ: ಇಲ್ಲಿನ ’ಭಾಣಜಿ ಡಿ. ಖಿಮಜಿ‘ ನೂತನ ಕ್ರಿಕೆಟ್‌ ಮೈದಾನವನ್ನು ಹಿರಿಯ ಕ್ರಿಕೆಟಿಗ ಬ್ರಿಜೇಶ್‌ ಪಟೇಲ್ ಭಾನುವಾರ ಲೋಕಾರ್ಪಣೆ ಮಾಡಿದರು.

ಶಿರೂರು ಲೇ ಔಟ್‌ನ ಜೆ.ಕೆ. ಸ್ಕೂಲ್‌ ಸಮೀಪ 8.5 ಎಕರೆಜಾಗದಲ್ಲಿ ಮೈದಾನ ನಿರ್ಮಿಸಲಾಗಿದೆ.ಒಂದೇ ಬಾರಿಗೆ ಎರಡು ಪಂದ್ಯಗಳನ್ನು ನಡೆಸಲು ಅವಕಾಶವಿರುವುದು ಮೈದಾನದ ವಿಶೇಷತೆ.

ಹಲವಾರು ಕ್ರಿಕೆಟಿಗರನ್ನು ರಾಜ್ಯ ತಂಡಕ್ಕೆ ನೀಡಿರುವಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ನ ಬೆಳ್ಳಿ ಮಹೋತ್ಸವ ಸಮಾರಂಭ ಕೂಡ ಇದೇ ವೇಳೆ ನಡೆಯಿತು. ಆಗ ಮಾತನಾಡಿದ ಬ್ರಿಜೇಶ್‌‘ಈ ಹಿಂದೆ ಕ್ರಿಕೆಟ್‌ ತರಬೇತಿ ಪಡೆಯಲು ಇಲ್ಲಿನ ಆಟಗಾರರುಶಿಕ್ಷಣ, ಪೋಷಕರು ಎಲ್ಲವನ್ನು ಬಿಟ್ಟು ಬೆಂಗಳೂರಿಗೆ ಬರಬೇಕಿತ್ತು. ಇದನ್ನು ಅರಿತು ಕೆಎಸ್‌ಸಿಎಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಿದೆ‘ ಎಂದರು.

ADVERTISEMENT

’ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತ ಆಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ವಿವಿಧ ವಯೋಮಿತಿಯ ರಾಜ್ಯ ತಂಡಗಳಲ್ಲಿ ಬೆಂಗಳೂರು ಹೊರಗಿನವರೇ ಹೆಚ್ಚುಆಟಗಾರರು ಇದ್ದಾರೆ‘ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.