ADVERTISEMENT

ಟಿ10 ಕ್ರಿಕೆಟ್: ಭಾರತದ ಫ್ರ್ಯಾಂಚೈಸ್‌ಗೆ ನಿಷೇಧ ಶಿಕ್ಷೆ

ಪಿಟಿಐ
Published 29 ಏಪ್ರಿಲ್ 2020, 19:45 IST
Last Updated 29 ಏಪ್ರಿಲ್ 2020, 19:45 IST
   

ನವದೆಹಲಿ: ಎರಡು ವರ್ಷಗಳ ಹಿಂದೆ ಟಿ10 ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ್ದ ಭಾರತೀಯ ಮೂಲದ ಫ್ರ್ಯಾಂಚೈಸ್‌ನ ಮಾಲೀಕ ದೀಪಕ್ ಅಗರವಾಲ್ ಅವರಿಗೆ ಐಸಿಸಿಯು ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾಗವಹಿಸಿದ್ದ ಸಿಂಧಿಸ್ ತಂಡದ ಮಾಲೀಕ ದೀಪಕ್ ಮೇಲೆ ಭ್ರಷ್ಟಾಚಾರದ ಆರೋಪ ಗಳಿದ್ದವು.

‘ಅಗರವಾಲ್ ನಿಯಮಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದನ್ನು ಪತ್ತೆ ಹಚ್ಚಲಾಗಿತ್ತು. ಅವರೊಂದಿಗೆ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕದಲ್ಲಿದ್ದ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪವೂ ಅವರ ಮೇಲಿದೆ. ಅವರಿಬ್ಬರ ಫೋನ್ ಕರೆಗಳ ದಾಖಲೆಗಳು ಸಿಕ್ಕಿವೆ. ಅವರಿಬ್ಬರ ನಡುವೆ ಮಾತುಕತೆ ಮತ್ತು ಸಂದೇಶಗಳ ವಿನಿಮಯಗಳು ನಡೆದಿರುವುದು ದೃಢಪಟ್ಟಿದೆ. ಅಲ್ಲದೇ ತನಿಖೆಯನ್ನು ವಿಳಂಬಗೊಳಿಸಲು ಮತ್ತು ಹಾದಿ ತಪ್ಪಿಸಲು ಕೂಡ ಅವರು ಪ್ರಯತ್ನಿಸಿದ್ದಾರೆ. ಆದ್ದರಿಂದ ಅವರಿಗೆ ಶಿಕ್ಷೆ ವಿಧಿಸಲಾಗಿದೆ’ ಎಂದು ಐಸಿಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.