ADVERTISEMENT

ಮ್ಯಾಚ್ ಫಿಕ್ಸಿಂಗ್‌: ಗುಣವರ್ಧನೆ ಆರೋಪಮುಕ್ತ

ಏಜೆನ್ಸೀಸ್
Published 10 ಮೇ 2021, 14:42 IST
Last Updated 10 ಮೇ 2021, 14:42 IST
ಆವಿಷ್ಕ ಗುಣವರ್ಧನೆ
ಆವಿಷ್ಕ ಗುಣವರ್ಧನೆ   

ಕೊಲಂಬೊ: ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಶ್ರೀಲಂಕಾ ಟೆಸ್ಟ್ ಆಟಗಾರ ಆವಿಷ್ಕ ಗುಣವರ್ಧನೆ ಅವರನ್ನು ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದ ಸ್ವತಂತ್ರ ನ್ಯಾಯಮಂಡಳಿ ಆರೋಪಮುಕ್ತಗೊಳಿಸಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ತಿಳಿಸಿದೆ.

ಶ್ರೀಲಂಕಾದ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ನುವಾನ್ ಜೋಯ್ಸಾ ಅವರ ಮೇಲೆ ಹೊರಿಸಿದ್ದ ನಾಲ್ಕು ಆರೋಪಗಳ ಪೈಕಿ ಮೂರನ್ನು ಈ ನ್ಯಾಯಮಂಡಳಿ ವಜಾ ಮಾಡಿದೆ. ಅವರ ಮೇಲೆ ಕಳೆದ ತಿಂಗಳು ಆರು ವರ್ಷಗಳ ನಿಷೇಧ ಹೇರಲಾಗಿತ್ತು.

2017ರಲ್ಲಿ ಯುಎಇಯಲ್ಲಿ ನಡೆದಿದ್ದ ಟಿ10 ಟೂರ್ನಿಯೊಂದರಲ್ಲಿ ಪಂದ್ಯಗಳನ್ನು ಫಿಕ್ಸ್ ಮಾಡಲು ಇವರಿಬ್ಬರು ಪ್ರಯತ್ನಿಸಿದ್ದರು ಎಂದು ದೂರಲಾಗಿತ್ತು. ಗುಣವರ್ಧನೆ ಅವರ ಮೇಲಿನ ಆರೋಪಗಳನ್ನು ಅವಿರೋಧವಾಗಿ ವಜಾ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.