
ಪಿಟಿಐ
ದುಬೈ: ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರನ್ನು ಐಸಿಸಿಯ ಅಕ್ಟೋಬರ್ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತ ತಂಡವು ಭಾನುವಾರ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಅವರು ಕೆಲವು ಉಪಯುಕ್ತ ಇನಿಂಗ್ಸ್‌ಗಳನ್ನು ಆಡಿದ್ದರು.
ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್ ಮತ್ತು ಆಸ್ಟ್ರೇಲಿಯಾದ ಬ್ಯಾಟರ್ ಆಶ್ಲೇ ಗಾರ್ಡನರ್ ಅವರೂ ಈ ಗೌರವ ಪಡೆಯಲು ರೇಸ್‌ನಲ್ಲಿದ್ದಾರೆ.
29 ವರ್ಷ ವಯಸ್ಸಿನ ಮಂದಾನ ಮತ್ತು ಪ್ರತಿಕಾ ರಾವಲ್ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಭಾರತಕ್ಕೆ ಬಿರುಸಿನ ಆರಂಭ ನೀಡಿದ್ದರು. ಆಸ್ಟ್ರೇಲಿಯಾ ಎದುರು ಬಿರುಸಿನ 80 ರನ್ ಗಳಿಸಿದ್ದ ಅವರು, ಇಂಗ್ಲೆಂಡ್ ವಿರುದ್ಧ 88 ರನ್ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.