ADVERTISEMENT

ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ ಕಣಕ್ಕಿಳಿಯಲು ಸಿದ್ಧ: ಪೂಜಾರ

ಪಿಟಿಐ
Published 25 ಮೇ 2025, 23:02 IST
Last Updated 25 ಮೇ 2025, 23:02 IST
ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ   

ನವದೆಹಲಿ: ‘ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ ಕಣಕ್ಕಿಳಿಯಲು ಸಿದ್ಧ. ಆದರೆ ನಾನು ವಾಸ್ತವ ಜಗತ್ತಿನಲ್ಲಿ ಜೀವಿಸುವ ವ್ಯಕ್ತಿ. ಈಗ ನಾನು ಮಾಡುತ್ತಿರುವ ಕಾರ್ಯದ ಬಗ್ಗೆ ಸಂತೃಪ್ತಿಯಿದೆ’ ಎಂದು ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಚೇತೇಶ್ವರ್ ಪೂಜಾರ ಹೇಳಿದರು. 

ಟೆಸ್ಟ್ ಪರಿಣತ ಬ್ಯಾಟರ್ ಪೂಜಾರ ಅವರು ಕಳೆದ ಎರಡು ವರ್ಷಗಳಿಂದ ಭಾರತ ತಂಡದಲ್ಲಿ ಆಡಿಲ್ಲ. 2023ರ ಜೂನ್‌ನಲ್ಲಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಆಡಿದ್ದರು. ಅದರ ನಂತರ ತಂಡದಲ್ಲಿ ಅವಕಾಶ ಪಡೆದಿಲ್ಲ. ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ಭಾರತ ತಂಡವು ಟೆಸ್ಟ್ ಸರಣಿ ಆಡಲಿದೆ. ಅದರ ನೇರಪ್ರಸಾರ ಮಾಡಲಿರುವ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಭಾನುವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪೂಜಾರ ಮಾತನಾಡಿದರು. 

‘ನನ್ನ ಕ್ರಿಕೆಟ್ ಆಟವನ್ನು ಮನಪೂರ್ತಿ ಆಸ್ವಾದಿಸುತ್ತೇನೆ.  ನಾನು ಪ್ರತಿದಿನವೂ ಅಭ್ಯಾಸ ಮಾಡುತ್ತೇನೆ. ಫಿಟ್‌ನೆಸ್‌ ನಿರ್ವಹಿಸುತ್ತೇನೆ. ಅದು ನನಗೆ ಹಿತಾನುಭವ ನೀಡುತ್ತದೆ. ಮುಂದೆ ಆಗುವುದನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ. ಈಗ ನನ್ನ ಕೈಯಲ್ಲಿರುವುದರ ಬಗ್ಗೆ ಮಾತ್ರ ಮಾಡಲು ಸಾಧ್ಯ’ ಎಂದು  37 ವರ್ಷದ ಪೂಜಾರ ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.