ಸಿಡ್ನಿ : ಅವಕಾಶ ದೊರೆತರೆ ಮುಂದಿನ ಮೂರು ವಿಶ್ವಕಪ್ ಟೂರ್ನಿಯಲ್ಲಿ ಕೀಪಿಂಗ್ ಹೊಣೆ ಹೊರುತ್ತೇನೆ ಎಂದುಸೀಮಿತ ಓವರ್ಗಳ ಮಾದರಿಯಲ್ಲಿ ಭಾರತ ಕ್ರಿಕೆಟ್ ತಂಡದ ಉಪನಾಯಕ ಆಗಿರುವ, ಕನ್ನಡಿಗ ಕೆ.ಎಲ್. ರಾಹುಲ್ ಹೇಳಿದ್ದಾರೆ.
ರಾಹುಲ್ ಅವರು ಸದ್ಯ ಸೀಮಿತ ಓವರ್ಗಳ ಮಾದರಿಯ ವಿಕೆಟ್ ಕೀಪಿಂಗ್ನಲ್ಲಿ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಎರಡು ಟ್ವೆಂಟಿ–20 ವಿಶ್ವಕಪ್ ಟೂರ್ನಿಗಳು ಹಾಗೂ ಏಕದಿನ ವಿಶ್ವಕಪ್ ನಡೆಯಲಿವೆ.
28 ವರ್ಷದ ಈ ರಾಹುಲ್ ಕೀಪಿಂಗ್ ಗ್ಲೌಸ್ ತೊಟ್ಟರೆ ತಂಡಕ್ಕೆ ಹೆಚ್ಚುವರಿ ಬ್ಯಾಟ್ಸ್ಮನ್ ಅಥವಾ ಬೌಲರ್ಅನ್ನು ಹೊಂದುವ ಅವಕಾಶ ಇರಲಿದೆ.
‘ತಂಡದ ಸಂಯೋಜನೆಗೆ ಒಂದಷ್ಟು ಸಹಾಯವಾಗುತ್ತದೆ ಎನ್ನುವುದಾದರೆ ನಾನು ಮುಂದಿನ ಮೂರು ವಿಶ್ವಕಪ್ ಟೂರ್ನಿಗಳಲ್ಲಿ ನಾನು ಕೀಪಿಂಗ್ ಜವಾಬ್ದಾರಿ ನಿಭಾಯಿಸುವುದನ್ನು ಇಷ್ಟಪಡುತ್ತೇನೆ‘ಎಂದು ರಾಹುಲ್ ಹೇಳಿದ್ದಾರೆ.
’ಆದರೆ ಈ ಕುರಿತು ತಂಡದ ಆಡಳಿತ ಮಂಡಳಿ ನನಗೇನೂ ಹೇಳಿಲ್ಲ. ಒಂದು ತಂಡವಾಗಿ ನಾವು ಆ ರೀತಿ ವಿಚಾರ ಮಾಡುತ್ತಿಲ್ಲ. ವಿಶ್ವಕಪ್ ಟೂರ್ನಿಗಳು ಮುಖ್ಯವಾಗುತ್ತದೆ. ಈ ಟೂರ್ನಿಗಳಿಗಾಗಿ ತಂಡಗಳು ಬಹಳಷ್ಟು ಸಿದ್ಧತೆಯನ್ನು ನಡೆಸುತ್ತವೆ. ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ನಾನು ಸ್ಥಿರ ಪ್ರದರ್ಶನ ತೋರಿದರೆ ಹೆಚ್ಚುವರಿ ಬ್ಯಾಟ್ಸ್ಮನ್ ಅಥವಾ ಬೌಲರ್ಅನ್ನು ಹೊಂದುವ ಅವಕಾಶ ತಂಡಕ್ಕೆ ಇರುತ್ತದೆ‘ ಎಂದು ರಾಹುಲ್ ನುಡಿದರು.
ಏಕದಿನ ಮಾದರಿಯಲ್ಲಿ ಐದನೇ ಕ್ರಮಾಂಕದಲ್ಲಿ ಹಾಗೂ ಟಿ–20 ಪಂದ್ಯಗಳಲ್ಲಿ ಆರಂಭಿಕನಾಗಿ ರಾಹುಲ್ ಕಣಕ್ಕಿಳಿಯುತ್ತಾರೆ.
‘ನಾವು ಕೊನೆಯ ಬಾರಿ ಆಡಿದ್ದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೆ. ಈ ಕ್ರಮಾಂಕ ನನಗೆ ಬಹಳಷ್ಟು ತೃಪ್ತಿ ನೀಡಿದೆ. ತಂಡ ಹೇಳುವ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ಧ‘ ಎಂದು ಅವರು ನುಡಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.