ADVERTISEMENT

IND A vs NZ A ಟೆಸ್ಟ್: ಚಹಾ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 10:21 IST
Last Updated 11 ಸೆಪ್ಟೆಂಬರ್ 2022, 10:21 IST
   

ಹುಬ್ಬಳ್ಳಿ:ತುಂತುರು ಮಳೆಯ ನಡುವೆಯೂ ಆಟ ಆಡುತ್ತಿರುವ ನ್ಯೂಜಿಲೆಂಡ್‌ ‘ಎ‘ ತಂಡವು ಚಹಾವಿರಾಮದ ವೇಳೆಗೆ 12.3 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡು 39 ರನ್‌ ಗಳಿಸಿದೆ.

ಆಗಾಗ ಕಾಡುತ್ತಿರುವ ತುಂತುರು ಮಳೆಯ ನಡುವೆಯೂ ಭಾರತ ತಂಡದ ವೇಗಿಗಳು ಉತ್ತಮ ಬೌಲಿಂಗ್‌ ನಡೆಸುತ್ತಿದ್ದಾರೆ.

ಮೂರು ಪಂದ್ಯಗಳ ಸರಣಿಯ ಪೈಕಿ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಿಂಚಿದ್ದ ಮುಕೇಶ್‌ ಕುಮಾರ್‌ಮೊದಲ ವಿಕೆಟ್‌ ಪಡೆದು ಸಂಭ್ರಮಿಸಿದರು.

ADVERTISEMENT

9.5ನೇ ಓವರ್‌ನಲ್ಲಿ ಮುಕೇಶ್‌ ಕುಮಾರ್‌ ಬೌಲಿಂಗ್‌ನಲ್ಲಿ ಕಿವೀಸ್‌ನ ಆರಂಭಿಕ ಆಟಗಾರ ಜೋಕಾರ್ಟ್‌ (17 ರನ್‌, 47 ಎ, 3 ಬೌಂಡರಿ) ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್‌ ಅವರಿಗೆ ಕ್ಯಾಚಿತ್ತರು.

ಬಳಿಕ ಮೈದಾನಕ್ಕೆ ಬಂದ ಡೇನ್‌ ಕ್ಲೇವರ್‌(1 ರನ್‌, 10 ಎಸೆತ) ಅವರನ್ನು ವೇಗಿ ಶಾರ್ದೂಲ್‌ ಠಾಕೂರ್‌ ಅವರು ಪೆವಿಲಿಯನ್‌ಗೆ ಕಳಿಸಿದರು.

ಶಾರ್ದೂಲ್‌ ಹಾಕಿದ12ನೇ ಓವರ್‌ನ 3ನೇ ಎಸೆತವನ್ನುಕ್ಲೇವರ್‌ ಗಲ್ಲಿಯತ್ತ ತಳ್ಳುವಾಗ ಹೈದರಾಬಾದ್ ಹುಡುಗ ತಿಲಕ್ ವರ್ಮಾಗೆ ಕ್ಯಾಚ್‌ ನೀಡಿದರು.

ಮಾರ್ಕ್‌ ಚಾಪಮನ್‌ ಇದೀಗ ಕ್ರೀಡಾಂಗಣಕ್ಕೆ ಬಂದಿದ್ದು, ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.