ADVERTISEMENT

IND vs ENG: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2024, 11:31 IST
Last Updated 24 ಜನವರಿ 2024, 11:31 IST
<div class="paragraphs"><p>ಬ್ರೆಂಡನ್ ಮೆಕಲಮ್ ಹಾಗೂ ಬೆನ್ ಸ್ಟೋಕ್ಸ್</p></div>

ಬ್ರೆಂಡನ್ ಮೆಕಲಮ್ ಹಾಗೂ ಬೆನ್ ಸ್ಟೋಕ್ಸ್

   

(ಚಿತ್ರ ಕೃಪೆ: X/@englandcricket)

ಹೈದರಾಬಾದ್: ಭಾರತ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಆಡುವ ಬಳಗವನ್ನು ಪ್ರಕಟಿಸಲಾಗಿದೆ.

ADVERTISEMENT

ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಹೈದರಾಬಾದ್‌ನಲ್ಲಿ ಗುರುವಾರ ಆರಂಭವಾಗಲಿದೆ. ಇದರಂತೆ ಒಂದು ದಿನ ಮೊದಲೇ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.

ತಂಡದಿಂದ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರನ್ನು ಕೈಬಿಡಲಾಗಿದೆ. ನಾಲ್ವರು ಸ್ಪಿನ್ನರ್‌ಗಳು ಸ್ಥಾನ ಪಡೆದಿದ್ದಾರೆ.

ಟಾಮ್ ಹಾರ್ಟ್ಲಿ ಚೊಚ್ಚಲ ಟೆಸ್ಟ್ ಕ್ಯಾಪ್ ಪಡೆಯಲಿದ್ದಾರೆ. ನಾಯಕ ಬೆನ್ ಸ್ಟೋಕ್ಸ್, ಓಲಿ ಪೋಪ್, ರೆಹಾನ್ ಅಹ್ಮದ್ ತಂಡಕ್ಕೆ ಮರಳಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಇಂತಿದೆ:

1. ಜಾಕ್ ಕ್ರಾವ್ಲಿ

2. ಬೆನ್ ಡಕೆಟ್

3. ಓಲಿ ಪೋಪ್

4. ಜಾನಿ ಬೇಸ್ಟೊ

5. ಬೆನ್ ಸ್ಟೋಕ್ಸ್ (ನಾಯಕ)

7. ಬೆನ್ ಫೋಕ್ಸ್

8. ರೆಹಾನ್ ಅಹ್ಮದ್

9. ಟಾಮ್ ಹಾರ್ಟ್ಲಿ

10. ಮಾರ್ಕ್ ವುಡ್

11. ಜಾಕ್ ಲೀಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.