ADVERTISEMENT

IND vs ENG: ಇಂಗ್ಲೆಂಡ್‌ ಗೆಲುವಿಗೆ 272 ರನ್ ಗುರಿ ನೀಡಿದ ಭಾರತ

ಏಜೆನ್ಸೀಸ್
Published 16 ಆಗಸ್ಟ್ 2021, 13:56 IST
Last Updated 16 ಆಗಸ್ಟ್ 2021, 13:56 IST
ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ
ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ   

ಲಂಡನ್: ಮೊಹಮ್ಮದ್ ಶಮಿ ಅವರ ಆಕರ್ಷಕ ಅರ್ಧಶತಕ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾವು 8 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಅಂತಿಮ ದಿನದಾಟದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್‌ಗೆ 272 ರನ್ ಗೆಲುವಿನ ಗುರಿ ನೀಡಿದೆ.

ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಚೇತೇಶ್ವರ್ ಪೂಜಾರ (45 ರನ್) ಮತ್ತು ಅಜಿಂಕ್ಯ ರಹಾನೆ (61 ರನ್) ತಂಡವನ್ನು ಆತಂಕದ ಸುಳಿಯಿಂದ ಪಾರು ಮಾಡಿದ್ದರು. ಐದನೇ ದಿನದಾಟದಲ್ಲಿ ಆಕರ್ಷಕವಾಗಿ ಆಡಿದ ಮೊಹಮ್ಮದ್ ಶಮಿ (56 ರನ್, 70 ಎಸೆತ, 6 ಬೌಂಡರಿ, 1 ಸಿಕ್ಸರ್), ಬೂಮ್ರಾ (34 ರನ್, 64 ಎಸೆತ, 3 ಬೌಂಡರಿ) ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ದಾಖಲಿಸಿದರು.

ಇಂಗ್ಲೆಂಡ್ ಪರ ಮಾರ್ಕ್ ವುಡ್ 3, ಮೊಯಿನ್ ಆಲಿ ಮತ್ತು ರಾಬಿನ್ಸನ್ ತಲಾ 2, ಸ್ಯಾಮ್ ಕರ್ರನ್ 1 ವಿಕೆಟ್ ಪಡೆದರು.

ADVERTISEMENT

ನಾಟಿಂಗ್‌ಹ್ಯಾಂನಲ್ಲಿ ನಡೆದಿದ್ದ ಮೊದಲ ಪಂದ್ಯವು ಮಳೆಯ ಕಾರಣ ಡ್ರಾಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.