ADVERTISEMENT

IND vs ENG 4th Test | ಮೊದಲ ಇನ್ನಿಂಗ್ಸ್‌: 353 ರನ್‌ಗಳಿಗೆ ಆಂಗ್ಲರು ಆಲೌಟ್‌

ಏಜೆನ್ಸೀಸ್
Published 24 ಫೆಬ್ರುವರಿ 2024, 5:40 IST
Last Updated 24 ಫೆಬ್ರುವರಿ 2024, 5:40 IST
   

ರಾಂಚಿ: ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್ ‘ಬಾಝ್‌ಬಾಲ್‌’ ಆಟವನ್ನು ಬದಿಗಿಟ್ಟು ತಮ್ಮ ಸಹಜ ಆಟಕ್ಕೆ ಮರಳಿದರು. ಈ ಪರಿಣಾಮ ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ಗೆ ಎಲ್ಲಾ ವಿಕೆಟ್‌ ಕಳೆದುಕೊಂಡು 353 ರನ್‌ಗಳಿಸಿದೆ. 

ಟಾಸ್‌ ಗೆದ್ದ ಬೆನ್‌ ಸ್ಟೋಕ್ಸ್‌ ಬ್ಯಾಟ್ ಮಾಡಲು ನಿರ್ಧರಿಸಿದರು. ಶುಕ್ರವಾರ ಬೆಳಿಗ್ಗೆ ಬೌಲರ್‌ಗಳು ಮೇಲುಗೈ ಸಾಧಿಸಿದರೂ ತೇವಾಂಶ ಕಡಿಮೆಯಾದ ಬಳಿಕ ಬ್ಯಾಟರ್‌ಗಳು ನಿಟ್ಟುಸಿರಿಟ್ಟರು. ಜಾಕ್‌ ಕ್ರಾಲಿ 42, ಬೇಸ್ಟೊ 38, ಓಲಿ ರಾಬಿನ್ಸನ್‌ 58 ರನ್‌ಗಳಿಸಿದರು.

ಸರಣಿಯಲ್ಲಿ ಸತತವಾಗಿ ವಿಫಲರಾಗಿ ಟೀಕೆಗೆ ಗುರಿಯಾಗಿದ್ದ ಜೋ ರೂಟ್ ತಾವು ಅದಕ್ಕೆ ಮಿಗಿಲಾದ ಆಟಗಾರ ಎಂಬುದನ್ನು ಶುಕ್ರವಾರ ಆರಂಭವಾದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಅಜೇಯ ಶತಕದ ಮೂಲಕ ತೋರಿಸಿಕೊಟ್ಟರು. ಅವರು 122 ರನ್‌ ಪೇರಿಸಿ ಅಜೇಯರಾಗಿ ಉಳಿದರು.

ADVERTISEMENT

 ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆಕಾಶ್ ದೀಪ್ 3, ಸಿರಾಜ್ 2 ವಿಕೆಟ್‌ ಪಡೆದರೇ, ಜಡೇಜ 4 ವಿಕೆಟ್‌ ಕಬಳಿಸಿದರು. ಇಂದು 11 ಗಂಟೆ ಸುಮಾರಿಗೆ ಭಾರತ ತಂಡ ಮೊದಲ ಇನ್ನಿಂಗ್ಸ್‌ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.