ಪುಣೆ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ–20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 181 ರನ್ ಪೇರಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಬಂದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಈ ಬಾರಿಯೂ ಆರಂಭಿಕ ಬ್ಯಾಟರ್ ಸಂಜು ಸಾಮ್ಸನ್ ವಿಫಲರಾದರು. ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು. ತಿಲಕರ್ ವರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ಸೊನ್ನೆ ಸುತ್ತಿದರು,. ಸೂರ್ಯ ಕಳಪೆ ಬ್ಯಾಟಿಂಗ್ ಫಾರ್ಮ್ ಈ ಪಂದ್ಯದಲ್ಲೂ ಮುಂದುವರಿಯಿತು.
ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ 29 ರನ್ ಬಾರಿಸಿದರು. ಭರವಸೆಯ ಆಟವಾಡುತ್ತಿದ್ದ ರಿಂಕು 30 ರನ್‌ಗೆ ಔಟಾದರು. ಆರನೇ ವಿಕೆಟ್‌ಗೆ ಜೊತೆಯಾದ ಶಿವಂ ದುಬೆ ಹಾಗೂ ಹಾರ್ದಿಲಗ ಪಾಂಡ್ಯ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದರು. ಉಭಯ ಆಟಗಾರರು ಅರ್ಧ ಶಕತ ಬಾರಿಸಿದರು.
ಇಂಗ್ಲೆಂಡ್ ಪರ ಶಕೀಬ್ ಮೊಹಮ್ಮದ್ 3, ಜೆಮಿ ಓವರ್‌ಟನ್ 2 ಹಾಗೂ ಆದಿಲ್ ರಶೀದ್, ಬ್ರೈಡನ್ ಕಾರ್ಸ್ ತಲಾ ಒಂದು ವಿಕೆಟ್ ಕಿತ್ತರು.
ಐದು ಪಂದ್ಯಗಳ ಸರಣಿಯಲ್ಲಿ 2–1ರಿಂದ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.