ADVERTISEMENT

IND vs NZ | ಟೆಸ್ಟ್ ತಂಡಕ್ಕೆ ಬೌಲ್ಟ್‌ ವಾಪಸ್; ಸ್ಯಾಂಟ್ನರ್ ಕೈ ಬಿಟ್ಟ ಕಿವೀಸ್

ಏಜೆನ್ಸೀಸ್
Published 17 ಫೆಬ್ರುವರಿ 2020, 7:51 IST
Last Updated 17 ಫೆಬ್ರುವರಿ 2020, 7:51 IST
   

ನವದೆಹಲಿ:ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್‌ 13 ಆಟಗಾರರ ತಂಡ ಪ್ರಕಟಿಸಿದ್ದು, ಗಾಯಗೊಂಡು ವಿಶ್ರಾಂತಿಯಲ್ಲಿದ್ದ ವೇಗಿ ಟ್ರೆಂಟ್‌ ಬೌಲ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸದ್ಯ ಮುಕ್ತಾಯವಾಗಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕ್ಲೀನ್‌ ಸ್ವೀಪ್‌ ಸಾಧಿಸಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌, ವಿರಾಟ್‌ ಕೊಹ್ಲಿಯನ್ನು ವೈಟ್‌ ವಾಷ್‌ ಮಾಡಿತ್ತು. ಹೀಗಾಗಿ ಟೆಸ್ಟ್ ಸರಣಿಯು ಕುತೂಹಲ ಕೆರಳಿಸಿದೆ. ಇದೇ ತಿಂಗಳು 21ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಆಡಿದ್ದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಿವೀಸ್‌ ಮುಖಭಂಗ ಅನುಭವಿಸಿತ್ತು. ಆ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಜೀತ್ ರಾವಲ್‌, ಆಲ್ರೌಂಡರ್‌ ಮಿಚೇಲ್‌ ಸ್ಯಾಂಟ್ನರ್ ಮತ್ತು ವೇಗಿ ಮ್ಯಾಟ್‌ ಹೆನ್ರಿ ಅವರನ್ನು ಕೈಬಿಡಲಾಗಿದ್ದು,ಎಡಗೈ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಮತ್ತು ವೇಗಿ ಕೈಲ್‌ ಜೆಮಿಸನ್‌ಗೆ ಅವಕಾಶ ನೀಡಲಾಗಿದೆ.

ADVERTISEMENT

ನ್ಯೂಜಿಲೆಂಡ್‌ ತಂಡ ಹೀಗಿದೆ
ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲಾಥಮ್‌, ಡರೆಲ್‌ ಮಿಚೆಲ್‌, ಹೆನ್ರಿ ನಿಕೋಲಸ್‌, ಟಿಮ್‌ ಸೌಥಿ, ಟಾಮ್‌ ಬ್ಲಂಡೆಲ್‌, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ ಗ್ರಾಂಡ್‌ ಹೋಮ್‌, ಬಿಜೆ ವಾಟ್ಲಿಂಗ್‌, ನೀಲ್‌ ವ್ಯಾಗ್ನರ್‌, ಕೈಲ್‌ ಜೆಮಿಸನ್‌, ಅಜಾಜ್‌ ಪಟೇಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.