
ಗುವಾಹಟಿ: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾವು 489 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಎರಡನೇ ದಿನದಾಟದ ಮೂರನೇ ಸೆಷನ್‌ನಲ್ಲಿ ಆಫ್ರಿಕಾ ತಂಡ ಆಲೌಟ್ ಆಗಿದೆ.
ಅಗ್ರ ಕ್ರಮಾಂಕದ ಎಲ್ಲ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದ್ದರಿಂದ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಮಧ್ಯಮ ಕ್ರಮಾಂಕದ ಸೆನುರನ್ ಮುತ್ತುಸಾಮಿ ಶತಕ(109) ಸಿಡಿಸಿದರೆ,, ಬಿರುಸಿನ ಬ್ಯಾಟಿಂಗ್ ಮಾಡಿದ ಮಾರ್ಕೊ ಜಾನ್‌ಸೆನ್ 93 ರನ್ ಸಿಡಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
ಉಳಿದಂತೆ, ಮರ್ಕರಂ(38), ರ್‍ಯಾನ್ ರಿಕಲ್ಟನ್ (35), ಟ್ರಿಸ್ಟನ್ ಸ್ಟಬ್ಸ್(49), ನಾಯಕ ತೆಂಬಾ ಬವುಮಾ(41) ತಂಡಕ್ಕೆ ನೆರವಾದರು.
ಭಾರತದ ಪರ ಕುಲ್ದೀಪ್ ಯಾದವ್ 115 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.