ಲಖನೌ: ವೇಗದ ಬೌಲರ್ ಹೆನ್ರಿ ಥಾರ್ನ್‌ಟನ್ (36ಕ್ಕೆ4) ಮತ್ತು ಆಫ್ ಸ್ಪಿನ್ನರ್ ಟಾಡ್ ಮರ್ಫಿ (48ಕ್ಕೆ2) ದಾಳಿಗೆ ಸಿಲುಕಿದ ಭಾರತ ಎ ತಂಡ, ನಾಲ್ಕು ದಿನಗಳ ‘ಟೆಸ್ಟ್’ ಪಂದ್ಯದ ಎರಡನೇ ದಿನವಾದ ಬುಧವಾರ 194 ರನ್‌ಗಳಿಗೆ ಆಲೌಟ್ ಆಯಿತು.
226 ರನ್‌ಗಳ ದೊಡ್ಡ ಮುನ್ನಡೆ ಕಟ್ಟಿಕೊಂಡ ಆಸ್ಟ್ರೇಲಿಯಾ ಎ, ಎರಡನೇ ಇನಿಂಗ್ಸ್‌ನಲ್ಲಿ ಆರಂಭದ ಕುಸಿತ ಅನುಭವಿಸಿದ್ದು 3 ವಿಕೆಟ್‌ಗೆ 16 ರನ್ ಗಳಿಸಿತ್ತು. ಆದರೆ ಒಟ್ಟಾರೆ 242 ರನ್ ಮುನ್ನಡೆಯಲ್ಲಿದೆ.
ಬೆಳಿಗ್ಗೆ ಪ್ರವಾಸಿ ಆಸ್ಟ್ರೇಲಿಯಾ ಎ ತಂಡ ಮೊದಲ ಇನಿಂಗ್ಸ್‌ನಲ್ಲಿ (ಮಂಗಳವಾರ: 9ಕ್ಕೆ350) ತನ್ನ ಮೊತ್ತವನ್ನು 420 ರನ್‌ಗಳಿಗೆ ಬೆಳೆಸಿತ್ತು. ಕೊನೆಯ ವಿಕೆಟ್‌ಗೆ ಟಾಡ್ ಮರ್ಫಿ (76) ಮತ್ತು ಥಾರ್ನ್‌ಟನ್ (ಔಟಾಗದೇ 32) ಅವರು ಕೊನೆಯ ವಿಕೆಟ್‌ಗೆ 91 ರನ್ ಸೇರಿಸಿದ್ದರು.
ಇದಕ್ಕೆ ಉತ್ತರವಾಗಿ ಭಾರತ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾರಾಯಣ ಜಗದೀಶನ್ (38, 45ಎ) ಮತ್ತು ಸಾಯಿ ಸುದರ್ಶನ್ (75, 140ಎ) ಬಿಟ್ಟರೆ ಉಳಿದವರು ವಿಫಲರಾದರು.
ಸ್ಕೋರುಗಳು:
ಮೊದಲ ಇನಿಂಗ್ಸ್:
ಆಸ್ಟ್ರೇಲಿಯಾ ಎ: 97.2 ಓವರುಗಳಲ್ಲಿ 420 (ಟಾಡ್ ಮರ್ಫಿ 76, ಹೆನ್ರಿ ಥಾರ್ನ್‌ಟನ್ ಔಟಾಗದೇ 32; ಗುರ್ನೂರ್ ಬ್ರಾರ್ 75ಕ್ಕೆ3, ಮಾನವ್ ಸುತಾರ್ 107ಕ್ಕೆ5)
ಭಾರತ ಎ: 52.5 ಓವರುಗಳಲ್ಲಿ 194 (ನಾರಾಯಣ ಜಗದೀಶನ್ 38, ಸಾಯಿ ಸುದರ್ಶನ್ 75, ಆಯುಷ್ ಬದೋಣಿ 21; ಹೆನ್ರಿ ಥಾರ್ನ್‌ಟನ್ 36ಕ್ಕೆ4, ಟಾಡ್ ಮರ್ಫಿ 48ಕ್ಕೆ2)
ಎರಡನೇ ಇನಿಂಗ್ಸ್:
ಆಸ್ಟ್ರೇಲಿಯಾ ಎ: 7.5 ಓವರುಗಳಲ್ಲಿ 3ಕ್ಕೆ17 (ನಥಾನ್ ಮೆಕ್‌ಸ್ವೀನಿ ಔಟಾಗದೇ 11)
ಕಂಕಷನ್‌ಗೆ ಒಳಗಾದ ಪ್ರಸಿದ್ಧ ಕೃಷ್ಣ
ಭಾರತ ಎ ತಂಡದ ಬ್ಯಾಟಿಂಗ್ ವೇಳೆ, ವೇಗದ ಬೌಲರ್ ಥಾರ್ನ್‌ಟನ್ ಬೌಲಿಂಗ್‌ನಲ್ಲಿ ಪ್ರಸಿದ್ಧ ಕೃಷ್ಣ ಅವರ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿತು. ಅವರು ಕಂಕಷನ್‌ಗೆ ಒಳಗಾದರು. ಅವರ ಬದಲು ವಿದರ್ಭ ವೇಗಿ ಯಶ್ ಠಾಕೂರ್ ಬದಲಿ ಆಟಗಾರನಾಗಿ ಆಡಲಿಳಿದರು.
ಹೆಲ್ಮೆಟ್‌ಗೆ ಚೆಂಡು ಬಡಿದ ತಕ್ಷಣ ವೈದ್ಯಕೀಯ ಸಿಬ್ಬಂದಿ ಧಾವಿಸಿದರು. ಪರೀಕ್ಷೆಯ ನಂತರ ಅವರು ಮೂರು ಓವರ್ ಆಡಿ, ನಂತರ ಮರಳಿದರು.
‘ಈಗ ಅವರು ಚೇತರಿಸಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದೆ. ಆಡುವ ಬಗ್ಗೆ ನಾಳೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಂಡದ ಮೂಲವೊಂದು ಪಿಟಿಐಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.